ಬೆಂಗಳೂರು,ಮೇ,5,2026 (www.justkannadain): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಹೆಚ್ಚಿನ ಮತಗಳಿಂದ ಗೆಲ್ಲುವ ನಿರೀಕ್ಷೆ ಮಾಡಿದ್ದವು ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ , ದಾವಣಗೆರೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಮಾಡಿದ್ದವು. ಆದರೂ ಗೆಲುವು ಗೆಲುವೇ ಅಲ್ಲವೇ ನಾವು ಈ ವಿಚಾರವಾಗಿ ಪಕ್ಷದ ಒಳಗಡೆ ಚರ್ಚೆ ಮಾಡುತ್ತೇವೆ ಎಂದರು.
ಶೃಂಗೇರಿಯಲ್ಲಿ ನಡೆದಿರುವುದು ಕೂಡ ಒಂದು ರೀತಿ ಮೋಸವೇ. ಶೃಂಗೇರಿಯಲ್ಲಿ ಬ್ಯಾಲೆಟ್ ಪೇಪರ್ ಗಳನ್ನೇ ಬದಲಾಯಿಸಿದ್ದಾರೆ. ತನಿಖೆ ಮಾಡದೆ ಏಕಾಏಕಿ ಫಲಿತಾಂಶ ಘೋಷಿಸಿದ್ದು ಸರಿನಾ ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Key words: expected, victory, Davangere, majority votes, Minister, Priyank Kharge







