Tuesday, August 4, 2026

BDA Apartments

Home Front Page ಪ.ಬಂಗಾಳದಲ್ಲಿ ಐತಿಹಾಸಿಕ ತೀರ್ಪು: ಪಾಪದ ಕೊಡ ತುಂಬಿದ್ದರಿಂದ ಕೆಳಗೆ ಇಳಿಸಿದ್ದಾರೆ-ವಿ.ಸೋಮಣ್ಣ

ಪ.ಬಂಗಾಳದಲ್ಲಿ ಐತಿಹಾಸಿಕ ತೀರ್ಪು: ಪಾಪದ ಕೊಡ ತುಂಬಿದ್ದರಿಂದ ಕೆಳಗೆ ಇಳಿಸಿದ್ದಾರೆ-ವಿ.ಸೋಮಣ್ಣ

ಬೆಂಗಳೂರು,ಮೇ,5,2026 (www.justkannada.in):  ಪಶ್ಚಿಮ ಬಂಗಾಳದಲ್ಲಿ ಜನ ಐತಿಹಾಸಿಕ ತೀರ್ಪು ನೀಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ  ಅಮಿತ್ ಶಾ ಶ್ರಮದಿಂದ ಪಕ್ಷ ಗೆಲುವು ಸಾಧಿಸಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಪ.ಬಂಗಾಳದ ಜನ ಐತಿಹಾಸಿಕ ತೀರ್ಪು ನೀಡಿದ್ದಾರೆ. ಪ. ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಮಮತಾ ಬ್ಯಾನರ್ಜಿ ಬಾಯಿ ತೆಗೆದ್ರೆ ಲೂಟಿ  ಲೂಟಿ ಅಂತಿದ್ದರು.  ಯಾರು ಲೂಟಿ ಮಾಡಿದ್ರು ಅಂತಾ ಗೊತ್ತಿದೆ. ಪ ಬಂಗಾಳದ ಅನೇಕರು ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ. ನಿಮ್ಮ ಪಾಪದ ಕೊಡ ತುಂಬಿದ್ದರಿಂದ ನಿಮ್ಮನ್ನ ಕೆಳಗೆ ಇಳಿಸಿದ್ದಾರೆ.  ಕೇಂದ್ರದ  ಒಂದು ಯೋಜನೆಯನ್ನೂ ನೀವು ಜಾರಿ ಮಾಡಲಿಲ್ಲ.  ಭವಿಷ್ಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿವೆ ಎಂದರು.

ರಾಜ್ಯದ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ಸೋಲು ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಎಲ್ಲರೂ ಟೀಮ್ ವರ್ಕ್ ಆಗಿ ಕೆಲಸ ಮಾಡಬೇಕಿತ್ತು. ಅದು ಆಗಲಿಲ್ಲ. ನನ್ನನ್ನು ಸೇರಿ ಪಕ್ಷ ದೊಡ್ಡದು ಎಂದು ಕೆಲಸ ಮಾಡಬೇಕಿತ್ತು. ಒಬ್ಬರ ಮೇಲೆ ಅನ್ನೋದಕ್ಕಿಂತ ಎಲ್ಲರ ಜವಾಬ್ದಾರಿ ಇದೆ.  ಬೇರೆಯವರ ರೀತಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಎರಡು ಕ್ಷೇತ್ರಗಳಲ್ಲೂ ಸೋತಿದ್ದಕ್ಕೆ ನನಗೂ ನೋವಾಗಿದೆ. ಅವರ ದುಡ್ಡು ಅವರು ಮಾಡಿರುವ ಪಾಪದಿಂದ ಗೆದ್ದಿದ್ದಾರೆ. ನಾನು ಯಾರನ್ನು ಹರಕೆ ಕುರಿ ಮಾಡುವುದಕ್ಕೆ ತಯಾರಿಲ್ಲ ನನಗೆ ಬಹಳ ಖುಷಿಯಾಗಿದ್ದು ಪ.ಬಂಗಾಳ, ತಮಿಳುನಾಡು ಫಲಿತಾಂಶ ಎಂದರು.

Key words:  Historic, win, West Bengal, BJP, V. Somanna