ಬೆಂಗಳೂರು,ಮೇ,2,2026 (www.justkannada.in): ಸಿಎಂ ಬದಲಾವಣೆ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾರು ಏನೇ ಹೇಳಿದರೂ ಹೈಕಮಾಂಡ್ ಹೇಳೋದು ಪ್ರಮುಖ ಆಗುತ್ತೆ. ಪ್ರತಿ ಬಾರಿಯೂ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಹೈಕಮಾಂಡ್ ಏನು ಮಾಡುತ್ತೆ ಅನ್ನೋದು ಪ್ರಮುಖ ಆಗುತ್ತದೆ ಎಂದರು.
ನಾನು ಸುಮ್ಮನೆ ಹೇಳಿಕೆ ನೀಢುವುದರಿಂದ ಏನು ಬದಲಾಗಲ್ಲ. ಕಳೆದ 25 ವರ್ಷಗಳಿಂದ ಸಿದ್ದಾಂತಕ್ಕೆ ಅಂಟಿ ಕೊಂಟಿದ್ದೇವೆ ಮೇಜರ್, ಮೈನರ್, ಅಹಿಂದ, ಎಸ್ ಸಿ, ಎಸ್ಟಿ ಎಲ್ಲರೂ ಒಂದಾಗಿದ್ದವು. ಈಗ ಅಹಿಂದ ಮತ್ತು ಇತರರು ಅಂತಾ ಪ್ರಾರಂಭವಾಗಿದೆ ಎಂದರು.
Key words: No need, discuss, CM change, Home Minister, Parameshwar







