Monday, September 14, 2026

BDA Apartments

ಖರ್ಗೆ ಹೇಳಿದ ಮೇಲೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು- ಗೃಹ ಸಚಿವ ಪರಮೇಶ್ವರ್ B...
Home Front Page ಖರ್ಗೆ ಹೇಳಿದ ಮೇಲೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು- ಗೃಹ ಸಚಿವ ಪರಮೇಶ್ವರ್

ಖರ್ಗೆ ಹೇಳಿದ ಮೇಲೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,1,2026 (www.justkannada.in):  ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಲ್ಲಿಗೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು.  ಅಪಾರವಾದ ಅನುಭವವಿರುವವರು .ಅವರ ಹೇಳಿಕೆ ಗೆ ಸ್ವಾಗತವಿದೆ. ಬದಲಾವಣೆ ಇಲ್ಲ ಎಂದಿರುವಾಗ ಎಲ್ಲದಕ್ಕೂ ಫುಲ್ ಸ್ಟಾಪ್ ಅಂತಾ ಅರ್ಥ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ಮೇಲೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಖರ್ಗೆ ಅವರ ಮಾತಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಎಲ್ಲವೂ ಸದ್ಯಕ್ಕೆ ಅಲ್ಲಿಗೆ ಮುಗಿಯುತ್ತೆ. ನಮ್ಮ ಅಭಿಪ್ರಾಯದಲ್ಲಿ ಖರ್ಗೆ ಸುಪ್ರೀಂ ಅಥಾರಿಟಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೈಕಮಾಂಡ್. ಖರ್ಗೆ ಅವರ ಬಾಯಿಂದ ಮಾತು ಬರುತ್ತೆ ಅಂದರೆ ಅದನ್ನ ಒಪ್ಪಿಕೊಳ್ಳಬೇಕು.  ಅಲ್ಲಿಗೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು.  ಈ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡೋದರಲ್ಲಿ ಅರ್ಥ ಇಲ್ಲ ಎಂದು  ಪರಮೇಶ್ವರ್ ತಿಳಿಸಿದರು.

Key words:  CM change, Mallikarjuna Kharge, Home Minister, Parameshwar