Monday, September 14, 2026

BDA Apartments

ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮ...
Home Front Page ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮಾನ- ಕೇಂದ್ರ ಸಚಿವೆ ಶೋಭಾ...

ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮಾನ- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ

ಬೆಂಗಳೂರು,ಏಪ್ರಿಲ್,25,2026 (www.justkannada.in): ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,   ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರ ಹಿಂದೂಧರ್ಮವನ್ನು ಅಪಮಾನಿಸುವ ಕೆಲಸ ಮಾಡುತ್ತಿದೆ ಕಳೆದ ವರ್ಷ ಕೂಡ ಸಿಇಟಿ ವೇಳೆ ಇದೇ ರೀತಿ ಘಟನೆ ಆಗಿತ್ತು ಆಗಲೂ ತಿಲಕ, ಮಾಂಗಲ್ಯ ಸರ, ಜನಿವಾರ ತೆಗೆಸಿದ್ದರು. ಈಗಲೂ ಜನಿವಾರ ತೆಗೆಸಿ  ಮತ್ತೆ ಅಪಮಾನ ಮಾಡಿದ್ದಾರೆ.  ಕಾಂಗ್ರೆಸ್ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಅಲ್ಪಸಂಖ್ತಾತರ ಒಲೈಕೆ ಮಾಡಲು ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ಹರಿಹಾಯ್ದರು.

ದೇಶದ ಮಹಿಳೆಯರು ಇಂಡಿಯಾ ಒಕ್ಕೂಟವನ್ನ ಸುಮ್ಮನೆ ಬಿಡಲ್ಲ  

ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಣಾ ಮಸೂದೆಗೆ ಸೋಲು ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದಕ್ಷಿಣ ಭಾರತ ಜನಸಂಖ್ಯೆ ಕಡಿಮೆ ಆಗಿ ಕಡಿಮೆ ಸೀಟ್ ಬಂದರೆ ಉತ್ತರ ಭಾರತವು ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿತು ಎಂದು ಇಂಡಿಯಾ ಒಕ್ಕೂಟ ದಂಗೆ ಎಬ್ಬಿಸುವ ಷಡ್ಯಂತ್ರ ಮಾಡುತ್ತಿದೆ. ಕ್ಷೇತ್ರ ಮರುವಿಂಗಡಣೆಯಿಂದ ರಾಜ್ಯದಲ್ಲಿ ಲೋಕಸಭೆ ಕ್ಷೇತ್ರ ಹೆಚ್ಚಳವಾಗಲಿದೆ.   42ಕ್ಕೆ ಏರಿಕೆಯಾಗುತ್ತೆ ತಮಿಳುನಾಡಿನಲ್ಲಿ 59ಕ್ಕೆ ಹೆಚ್ಚಾಗುತ್ತೆ ಇದರಿಂದ ದಕ್ಷಿಣ ಭಾರತಕ್ಕೆ ಲಾಭ ಇದೆ. ಆದರೆ ಇಂಡಿಯಾ ಒಕ್ಕೂಟ ಈ ಮಸೂದೆಯನ್ನ ಸೋಲಿಸಿದೆ. ಈ ಮಸೂದೆ ಬರುವ ದಿನಗಳಲ್ಲಿ ಪಾಸ್ ಆಗುತ್ತದೆ ಎಂಬ ವಿಶ್ವಾಸವಿದೆ. ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಅವಳ ಕೈಯಲ್ಲಿ ಬರೀ ಸೌಟು ಇಲ್ಲ ಆಯುಧವೂ ಇದೆ ಕಂಪ್ಯೂಟರ್ ಕೂಡ ಇದೆ. ದೇಶದ ಮಹಿಳೆಯರು ಇಂಡಿಯಾ ಒಕ್ಕೂಟವನ್ನ ಸುಮ್ಮನೆ ಬಿಡಲ್ಲ  ಎಂದರು.

Key words: Congress, insults, Hindus, Union Minister, Shobha Karandhlaje