ಬೆಂಗಳೂರು,ಏಪ್ರಿಲ್,25,2026 (www.justkannada.in): ರಾಜ್ಯದಲ್ಲಿ ಬಿಸಿ ತಾಪ, ಕುಡಿಯುವ ನೀರಿಗೆ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಹಳ ವರ್ಷಗಳ ನಂತರ ರಾಜ್ಯದಲ್ಲಿ ಬಿಸಿಗಾಳಿ ನೋಡುತ್ತಿದ್ದೇನೆ. ಡಿಸಸ್ಟರ್ ಮ್ಯಾನೇಜ್ ಮೆಂಟ್ ಜೊತೆ ಸಿಎಂ ಸಭೆ ಮಾಡಿದ್ದಾರೆ. ಆರೋಗ್ಯ ಇಲಾಖೆಯಿಂದ ಎಸ್ ಒಪಿ ಮಾಡಿದ್ದಾರೆ ಬೋರ್ ವೆಲ್ ಅಣೆಕಟ್ಟುಗಳಲ್ಲಿ ನೀರು ಕಡಿಮೆ ಆಗುತ್ತಿದೆ ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ ಎಂದರು.
ಹವಮಾನ ಏರುಪೇರಿನಿಂದ ಅನಾನುಕೂಲ ಆಗುತ್ತಿದೆ. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಖಾಸಗಿ ಬೋರ್ ವೆಲ್ ಗಳನ್ನ ಬಾಡಿಗೆ ಪಡೆಯಲು ಮುಂದಾಗಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: Drinking water, problem, next, two months, Minister, Priyank Kharge







