Wednesday, September 9, 2026

BDA Apartments

Home Crime SSLC ಪಾಸ್ ಸಂಭ್ರಮಿಸಲು ಹೋಗಿ ವಿದ್ಯಾರ್ಥಿ ಸಾವು

SSLC ಪಾಸ್ ಸಂಭ್ರಮಿಸಲು ಹೋಗಿ ವಿದ್ಯಾರ್ಥಿ ಸಾವು

ಕೋಲಾರ,ಏಪ್ರಿಲ್,23,2026 (www.justkannada.in): ಇಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಪಾಸ್ ಆಗಿದ್ದಕ್ಕೆ ಸಂಭ್ರಮಿಸಲು ಹೋಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಸೊಣ್ಣವಾಡ ಗ್ರಾಮದಲ್ಲಿ ನಡೆದಿದೆ.

ಸೊಣ್ಣವಾಡ ಗ್ರಾಮದ 15 ವರ್ಷದ ಕಿರಣ್  ಮೃತ ವಿದ್ಯಾರ್ಥಿ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಸಂಭ್ರಮಿಸಲು ಕಿರಣ್ ಸ್ನೇಹಿತರ ಜೊತೆ ತೆರಳಿದ್ದ. ಈ ಮಧ್ಯೆ ಬಾವಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಆಳವಾದ ಬಾವಿಯಲ್ಲಿ ಈಜುವಾಗ ಕಿರಣ್ ನಾಪತ್ತೆಯಾಗಿದ್ದು, ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಟುಕಾಟ ನಡೆಸುತ್ತಿದ್ದಾರೆ.

Key words: Student, dies,  celebrating, SSLC, pass