Wednesday, July 29, 2026

BDA Apartments

Home Front Page ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ: ಖರ್ಗೆ ಅವರನ್ನ ವಜಾ ಮಾಡಿ-ಆರ್.ಅಶೋಕ್

ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ: ಖರ್ಗೆ ಅವರನ್ನ ವಜಾ ಮಾಡಿ-ಆರ್.ಅಶೋಕ್

ಬೆಂಗಳೂರು,ಏಪ್ರಿಲ್,22,2026 (www.justkannada.in): ಪ್ರಧಾನಿ ಮೋದಿ ಅವರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ  ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಅವರನ್ನ ವಜಾ ಮಾಡಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಖರ್ಗೆ ಅವರಿಗೆ ವಯಸ್ಸಿನ ಮರೆವು ಜಾಸ್ತಿಯಾಗಿದೆಯೋ ಅಥವಾ ಅಹಂಕಾರದಿಂದ ಮಾತನಾಡುತ್ತಿದ್ದರೋ ಗೊತ್ತಿಲ್ಲ ಅಧಿಕಾರ ಸಿಗಲ್ಲ ಎಂಬ ಹತಾಶೆ ದುಃಖದಲ್ಲಿ ಹೇಳಿಕೆ  ನೀಡುತ್ತಿದ್ದಾರೆ. ಖರ್ಗೆ ಅವರಿಗೆ ಎದ್ದೇಳಲು ಆಗಲ್ಲ, ಓಡಾಡಲು ಆಗಲ್ಲ.  ಇಂತಹ ಸಂದರ್ಭಲ್ಲಿ ಹೇಳಿಕೆ ನೀಡಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದರು.

ದೇಶಧ ಪ್ರಧಾನಿಗಳ ಬಗ್ಗೆ  ಮಾತನಾಡುವಾಗ ಗೌರವ ಬೇಡವೇ?  ಇಲಿಗಳು ಬಿಲ ಸೇರಿದಂತೆ ಕಾಂಗ್ರೆಸ್ ಬಿಲ ಸೇರುತ್ತೆ. 5 ರಾಜ್ಯಗಳ ಚುನಾವಣ ಸಮೀಕ್ಷೆ ವರದಿಯಿಂದ ಭ್ರಮನಿರಸನಗೊಂಡಿದ್ದಾರೆ. ಖರ್ಗೆ ಕಾಲದಲ್ಲಿ ಎಲ್ಲಾ ರಾಜ್ಯಗಳು ಕೈಬಿಟ್ಟು ಹೋದರೆ ಅಪಮಾನ ಎಂದು ಇದನ್ನ ಮರೆಮಾಚಲು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರಸ್  ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅರ್ಹರಲ್ಲ. ನಾಳೆ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ  ಮಾಡುತ್ತೇವೆ ಎಂದರು.

Key words: Objectionable, statement, PM, Modi, Mallikarjuna Kharge, R. Ashok