ಬಿಜೆಪಿಯಿಂದ ಸುಳ್ಳು: ನಾವು ಯಾವಾಗಲೂ ಮಹಿಳಾ ಮೀಸಲಾತಿ ಪರ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,21,2026 (www.justkannada.in):  ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದೆವು ಎಂದು ಬಿಜೆಪಿಯುವರು ಸುಳ್ಳೂ ಹೇಳಿದ್ದಾರೆ . ಆದರೆ ನಾವು ಯಾವಾಗಲೂ ಮಹಿಳಾ ಮೀಸಲಾತಿ ವಿಧೇಯಕ ಪರವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಗುಂಡ್ಲುಪೇಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಮಹಿಳೆಯರು ಕಾಂಗ್ರೆಸ್ ಅನ್ನು ಕ್ಷಮಿಸಲ್ಲ ಎಂದು  ಪ್ರಧಾನಿ ಮೋದಿ ಅವರು ಹೇಳಿದ್ದಾರೆ.  2023ರಲ್ಲೇ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಆದರೆ 2028ರವರೆಗೂ ಜಾರಿಯಾಗಲ್ಲ ಎಂದು ನಿರ್ಧರಿಸಿದ್ದು ಬಿಜೆಪಿ.  ಮಹಿಳಾ ಮೀಸಲಾತಿ ಪರ ಇರುವ ಪಕ್ಷ ಅಂದ್ರೆ ಅದು ಕಾಂಗ್ರೆಸ್.  ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ50ರಷು ಮೀಸಲಾತಿ ಇರಲು ಕಾರಣ ಕಾಂಗ್ರೆಸ್.  ನಾವು ಯಾವಾಗಲೂ ಮಹಿಳಾ ಮೀಸಲಾತಿ ವಿಧೇಯಕ ಪರವಾಗಿದ್ದೇವೆ. ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಮಾತ್ರ ನಮ್ಮ ವಿರೋಧ. ರೈತರು ಮಹಿಳೆಯರ, ದಲಿತರನ್ನ ಬಿಜೆಪಿ ವಿರೋಧಿಸುತ್ತಿದೆ ಎಂದು ಕಿಡಿಕಾರಿದರು.

ನಮ್ಮ ಗ್ಯಾರಂಟಿ ಯೋಜನೆ ಕಾಪಿ ಮಾಡಿದ್ದಾರ.  ಮೋದಿ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಗ್ಯಾರಂಟಿ ಜಾರಿ ಮಾಡಿದರೆ ಖಜಾನೆ ಖಾಲಿ ಎಂದಿದ್ದರು.  ಗ್ಯಾರಂಟಿ ಜೊತೆ ಅಭಿವೃದ್ದಿ ನಡೆಯುತ್ತಿದೆ ಸಮಾಜದಲ್ಲಿ ಬಡವರು ಹಿಂದುಳಿದವರ ಪರ ಕಾಂಗ್ರೆಸ್ ಕೆಲಸ ಮಾಡುತ್ತಿದೆ . ಬಿಜೆಪಿಯವರು ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುತ್ತಿದ್ದಾರೆ  ಎಂದರು.

Key words: We, favor, women’s reservation, CM Siddaramaiah