Friday, September 18, 2026

BDA Apartments

SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲು ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ BDA JK_Adv BDA Adv
Home Front Page SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲು ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲು ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

ಬೆಂಗಳೂರು, ಏಪ್ರಿಲ್​​ ,21,2026 (www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ನೀಡುವ ಬದಲು ಅಂಕವನ್ನೇ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‍ ನಿರ್ದೇಶನ ನೀಡಿದೆ.

ಹಿಂದಿ ವಿಷಯಕ್ಕೆ ಅಂಕ ನೀಡುವಂತೆ ಸೂಚನೆ ಹಿನ್ನೆಲೆ ಹೈಕೋರ್ಟ್ ಆದೇಶ ಮರುಪರಿಶೀಲನೆ ಕೋರಿದ್ದ ಸರ್ಕಾರದ ಅರ್ಜಿ ಇತ್ಯರ್ಥಪಡಿಸಿದ  ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠವು ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಆದೇಶಿಸಿದೆ.

ವಿಚಾರಣೆ ವೇಳೆ  ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಜಾಗೊಂಡಿದೆ. ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಸರ್ಕಾರ ಕರಡು ರೂಪಿಸುತ್ತಿದೆ. ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ಕೋರ್ಟ್ ಗೆ ತಿಳಿಸಿದ್ದರು.

ಈ ವೇಳೆ ನ್ಯಾಯಪೀಠವು ಎಸ್ ಎಸ್ ಎಲ್ ಸಿ ಪರೀಕ್ಷೆ ಅಧಿಸೂಚನೆ ಹೊರಡಿಸಿದಾಗಲೇ ಇದನ್ನು ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿಲ್ಲದ ಗ್ರೇಡ್ ಪದ್ಧತಿಯನ್ನ ಈಗ ಅನುಷ್ಠಾನಗೊಳಿಸುತ್ತಿದ್ದೀರಿ? ಪಿಯುಸಿಯಲ್ಲಿ ಈಗ ಶೇ.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸಿದ ಬಳಿಕ ಸರ್ಕಾರ ಸೂಕ್ತವೆನಿಸಿದ ಕ್ರಮ ಕೈಗೊಳ್ಳಬಹುದು. ಆದರೆ ನಿಯಮ ರೂಪಿಸುವ ಮುಂಚಿನ ಪರೀಕ್ಷೆಯ ಅಂಕ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿತು.  ಹಾಗೆಯೇ 2025-26ನೇ ಸಾಲಿನ ಎಸ್​​ಎಸ್​​ಎಲ್​​ಸಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡುವಂತೆ ಸೂಚಿಸಿತು.

Key words: High Court, orders , marks, instead ,grades , SSLC, Hindi