ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ- MLC  ಸಿ.ಟಿ ರವಿ ಕಿಡಿ

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ  ಸೋಲಾದ ಕುರಿತಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಕಾಂಗ್ರೆಸ್ ನದ್ದು ಮಹಿಳಾ ವಿರೋಧಿ ನೀತಿ ಈಗ ಸಾಬೀತಾಗಿದೆ. ಮಹಿಳಾ ವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್.  ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ. ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನ ಮಹಿಳೆಯರಿಗೆ ತಿಳಿಸುತ್ತೇವೆ. ನಾವು ರಾಜ್ಯಾದ್ಯಂತ ಅಭಿಯಾನ ಕೈಗೊಳ್ಳುತ್ತೇವೆ ಎಂದರು.

ವಿದ್ಯುತ್ ಬಿಲ್  ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,  ಏನು ಉಳಿಸಿದ್ದಾರೆ.  ಬೇಕಾದರೆ ಗಾಳಿ ಮೇಲೂ ತೆರಿಗೆ ಹಾಕಿ ಬಿಡುತ್ತಾರೆ ಪೆಟ್ರೋಲ್, ಡೀಸೆಲ್ ನೀರು, ಕಸ ಸೇರಿ ಎಲ್ಲಾ ತೆರಿಗೆ ಹೆಚ್ಚಿಸಲಾಗಿದೆ ಆಡು ಮುಟ್ಟದ ಸೊಪ್ಪಿಲ್ಲ ಇವರು ವಿಧಿಸದ ತೆರಿಗೆಯಿಲ್ಲ. ಸರ್ಕಾರ ಸರಿಯಾಗಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಹರಿಹಾಯ್ದರು.

Key words: no apology, Congress, against,women – MLC, CT Ravi