Wednesday, September 9, 2026

BDA Apartments

Home Front Page ನನ್ನ ವೈಯಕ್ತಿಕ ವಿಚಾರ ಇಲ್ಲ: ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ- ಡಿಸಿಎಂ ಡಿಕೆ ಶಿವಕುಮಾರ್

ನನ್ನ ವೈಯಕ್ತಿಕ ವಿಚಾರ ಇಲ್ಲ: ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಏಪ್ರಿಲ್,17,2026 (www.justkannada.in):  ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಇಬ್ಬರು ಮುಸ್ಲೀಂ ಮುಖಂಡರ ಮೇಲೆ ಕ್ರಮ ಕೈಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಮುಸ್ಲೀಮ ನಾಯಕರ ಟಾರ್ಗೆಟ್  ಆರೋಪ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಇಲ್ಲ ಎಲ್ಲವೂ ಪಕ್ಷದ ನಿರ್ಧಾರ. ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪಕ್ಷಕ್ಕೆ ತನ್ನದೇ ಆದ ವರದಿ ಇರುತ್ತದೆ.  ಎಲ್ಲರೂ ನನ್ನ ಮೇಲೆ ಹೇಳಬಹುದು. ಆ ಬಗ್ಗೆ ನನಗೆ ಚಿಂತೆ ಇಲ್ಲ ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತೆ ಎಲ್ಲಾ ವರ್ಗಕ್ಕೆ ನ್ಯಾಯ ಕೊಡೋದೇ ಕಾಂಗ್ರೆಸ್ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: no, personal opinion,  Action, Delhi leaders, DCM, DK Shivakumar