ಇಂದು ಮಹಿಳಾ ಮೀಸಲಾತಿ, ಕ್ಷೇತ್ರವಿಂಗಡಣೆ ಬಿಲ್ ಅಂಗೀಕಾರಕ್ಕೆ ಮತದಾನ

ನವದೆಹಲಿ,ಏಪ್ರಿಲ್,17,2026 (www.justkannada.in): ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಸೇರಿ ಮೂರು ವಿಧೇಯಕಗಳನ್ನು ನಿನ್ನೆ  ಕೇಂದ್ರ ಸರ್ಕಾರ  ಲೋಕಸಭೆಯಲ್ಲಿ ಮಂಡಿಸಿದ್ದು ಇಂದು ಇವುಗಳ ಅಂಗೀಕಾರಕ್ಕೆ ಮತದಾನ ನಡೆಯಲಿದೆ.

ಇಂದು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ  ನಡೆಯಲಿದ್ದು, .ಸಾಂವಿಧಾನಿಕ ತಿದ್ದುಪಡಿ ಇರುವ ಕಾರಣ ಈ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸುವುದು ಕಡ್ಡಾಯ. ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು 360 ಮತಗಳ ಅಗತ್ಯವಿದೆ. ಆದರೆ ಎನ್‌ಡಿಎ ಬಲ ಇರುವುದು 293 ಮಾತ್ರ. ವಿಪಕ್ಷಗಳ ಬಲ 233 ಇದೆ. ಅತಿದೊಡ್ಡ ವಿಪಕ್ಷ  ಕಾಂಗ್ರೆಸ್ ನ 98 ಸದಸ್ಯರಿದ್ದಾರೆ, 37 ಎಸ್ ಪಿ,  28 ,  ಟಿಎಂಸಿ ಸದಸ್ಯರಿದ್ದಾರೆ. ಡಿಎಂಕೆ 22 ಸದಸ್ಯರಿದ್ದಾರೆ ಉಳಿದಂತೆ 7 ಪಕ್ಷೇತರರು, 7 ಜನ ವೈಎಸ್‌ಆರ್‌ಪಿ, ಎಂಐಎಂ, ಶಿರೋಮಣಿ ಅಕಾಲಿದಳ ಸದಸ್ಯರಿದ್ದಾರೆ. ಆದರೆ ಇವರು ಇನ್ನೂ ಬಹಿರಂಗವಾಗಿ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 360 ಮತಗಳನ್ನು ಪಡೆಯಲು, ಒಂದೋ ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್‌ (98) ಬೆಂಬಲಿಸಬೇಕು. ಇಲ್ಲದೇ ಹೋದಲ್ಲಿ ಎಸ್‌ಪಿ (37), ಟಿಎಂಸಿ (28), ಡಿಎಂಕೆ (22) ಪೈಕಿ ಯಾವುದಾದರೂ ಎರಡು ಪಕ್ಷಗಳು ಬೆಂಬಲಿಸಬೇಕು. ಒಂದು ವೇಳೆ ಬೆಂಬಲಿಸದಿದ್ದರೂ, ಮತದಾನದ ವೇಳೆ ಗೈರಾದರು ಸದನದ ಬಲ ಕುಸಿದು ಸರ್ಕಾರ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದಾಗಿದೆ.

Key words: Voting,  pass women’s reservation, constituency delimitation, bill, today