ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ

ನವದೆಹಲಿ,ಏಪ್ರಿಲ್,16,2026 (www.justkannada.in):  ಮಹಿಳಾ ಮೀಸಲಾತಿ ಕಾನೂನು ಜಾರಿಯ ಕ್ರೆಡಿಟ್ ನಮಗೆ ಬೇಡ.  ಬಿಲ್ ಪಾಸ್ ಆದರೆ ಎಲ್ಲಾ ಪಕ್ಷಗಳಿಗೂ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಮರುವಿಂಗಡಣೆ ಮಸೂದೆ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ವಿರೋಧಿಸುವವರನ್ನು ದೇಶ ಕ್ಷಮಿಸಲ್ಲ  ನಾವು ಒಗ್ಗಟ್ಟಾಗಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಬೇಕು . ಐತಿಹಾಸಿಕ ನಿರ್ಧಾರಕ್ಕೆ  ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ದೇಶವನ್ನು ಸದೃಢವಾಗಿ ನಿರ್ಮಿಸುವುದಕ್ಕೆ ಅವಕಾಶ ಸಿಕ್ಕಿದೆ.  ಇತಿಹಾಸ ನಿರ್ಮಿಸಲು ಇದೊಂದು ಸುವರ್ಣಾವಕಾಶ  ವಿಕಸಿತ ಭಾರತಕ್ಕೆ ಮಹತ್ವದ ಮಸೂದೆಗಳು ಅವಶ್ಯಕ . ರಾಷ್ಟ್ರ ನಿರ್ಮಾಣಕ್ಕೆ ಈ ಮಸೂದೆ ಗಳು ಸಹಕಾರಿ  ಮಹಿಳಾ ಮೀಸಲಾತಿಗೆ ರಾಜಕೀಯ ಬಣ್ಣ ಕೊಡುವುದು ಬೇಡ. ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂದರು.

ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ..

ಮಹಿಳಾ ಮೀಸಲಾತಿ ಕಾನೂಣು ಜಾರಿ ಕ್ರೆಡಿಟ್ ನಮಗೆ ಬೇಡ.  ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ ಯಾವ ರಾಜ್ಯಗಳಿಗೂ ಅನ್ಯಾಯವಾಗಲ್ಲ ಮಹಳಾ ಮೀಸಲಾತಿ ಭಾರತದ ಸಾಂಸ್ಕೃತಿಕ ಬದ್ಧತೆ  ಎಂದು ಪ್ರಧಾನಿ ಮೋದಿ ತಿಳಿಸಿದರು.

ರಾಜಕೀಯವಾಗಿ  ಮಾತ್ರ ಯೋಚಿಸುವವರಿಗೆ ಸಲಹೆ ನೀಡಲು ಬಯಸುತ್ತೇನೆ.  ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾದಾಗಿನಿಂದ ನಂತರ ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದವರು ಯಾರೇ ಇರಲಿ ದೇಶದ ಮಹಿಳೆಯರು ಅವರನ್ನು ಕ್ಷಮಿಸಿಲ್ಲ.  3 ದಶಕಗಳ ನಂತರ ಕಾನೂನು ಜಾರಿ ಮಾಡಲಾಗುತ್ತಿದೆ.  ಅದರ  ಕ್ರೆಡಿಟ್ ಲಾಭ  ಬೇಡ ಎಂದು ನುಡಿದರು.

Key words: credit, implementing, women’s reservation, PM Modi