Sunday, September 13, 2026

BDA Apartments

ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗ...
Home Front Page ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

ಮೈಸೂರು,ಏಪ್ರಿಲ್ ,15,2026 (www.justkannada.in): ತಮ್ಮ ವಿರುದ್ದ ಕುಟುಂಬ ರಾಜಕಾರಣ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನಾನು ಎಂಎಲ್ ಸಿ ಆಗಿರುವುದು ಕುಟುಂಬ ರಾಜಕಾರಣಕ್ಕಾಗಿ ಅಲ್ಲ. ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ ಎಂಎಲ್ ಸಿ ಆದೆ. ನಮ್ಮ ಕ್ಷೇತ್ರದ ಜನರ ರಕ್ಣಣೆಗೆ  ಎಂಎಲ್ ಸಿ ಆಗಿದ್ದೇನೆ.  ನಮ್ಮದು ಕುಟುಂಬ ರಾಜಕಾರಣ  ಅಲ್ಲ. ನಮ್ಮ ತಂದೆ ಏನು ನನ್ನನ್ನು ಪಕ್ಷದ ಅಧ್ಯಕ್ಷ ಮಾಡಿದ್ದಾರಾ?  ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ಆದರೆ ನಮ್ಮದು ಕುಟುಂಬ ರಾಜಕಾರಣ  ಅಲ್ಲ.  ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದೆ ಎಂದರು.

ನಮ್ಮ ತಂದೆಯೇ 5 ವರ್ಷ ಸಿಎಂ ಎಂದು ಪುನರುಚ್ಚರಿಸಿದ ಯತೀಂದ್ರ ಸಿದ್ದರಾಮಯ್ಯ,  ಖುದ್ದು ಸಿಎಂ ಅಧಿವೇಶನದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ.  ಸಿಎಂ ಖುದ್ದಾಗಿ ಹೇಳಿದ ಮೇಲೆ ಮತ್ತೆ ಚರ್ಚೆ ಇಲ್ಲ. ಸಚಿವ ಸಂಪುಟ ಪುನಾರಚನೆಗಾಗಿ ಶಾಸಕರು ದೆಹಲಿಗೆ ಹೋಗಿದ್ದಾರೆ. ಶಾಸಕರ ದೆಹಲಿ ಪ್ರವಾಸಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ ಸರ್ಕಾರವೂ ಭದ್ರ ಸಿಎಂ ಸ್ಥಾನವೂ ಭದ್ರ ಎಂದು ನುಡಿದರು.

Key words:   not, family politics, Yathindra Siddaramaiah, HDK