Sunday, August 30, 2026

BDA Apartments

Home Front Page ಖರ್ಗೆ ಮುಂದೆ ನಮ್ಮ ಬೇಡಿಕೆ ಇಟ್ಟಿದ್ದೇವೆ: ರಾಹುಲ್ ಗಾಂಧಿ ಭೇಟಿಗೆ ಯತ್ನ- ಶಾಸಕ ಟಿ.ಬಿ ಜಯಚಂದ್ರ

ಖರ್ಗೆ ಮುಂದೆ ನಮ್ಮ ಬೇಡಿಕೆ ಇಟ್ಟಿದ್ದೇವೆ: ರಾಹುಲ್ ಗಾಂಧಿ ಭೇಟಿಗೆ ಯತ್ನ- ಶಾಸಕ ಟಿ.ಬಿ ಜಯಚಂದ್ರ

ನವದಹಲಿ,ಏಪ್ರಿಲ್,14,2026 (www.justkannada.in):   ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ  ಹೈಕಮಾಂಡ್ ಭೇಟಿ ಮಾಡಲು ಹಿರಿಯ ಶಾಸಕರು ದೆಹಲಿಗೆ ತೆರಳಿದ್ದು ಈ ಸಂಬಂಧ ಶಾಸಕ ಟಿ.ಬಿ ಜಯಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಟಿ.ಬಿ ಜಯಚಂದ್ರ, ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ ನಮ್ಮ ಬೇಡಿಕೆ ಮುಂದಿಟ್ಟಿದ್ದೇವೆ. ಇಂದು ಬೇರೆ ಮುಖಂಡರನ್ನ ಭೇಟಿ ಮಾಡಲು ಪ್ರಯತ್ನ ಮಾಡುತ್ತೇವೆ. ಇಂದು ಹೈಕಮಾಂಡ್ ಮಟ್ಟದ ನಾಯಕರ ಭೇಟಿಗೆ ಸಮಯ ಕೇಳುತ್ತೇವೆ ಎಂದರು.

ಸಿಎಂ ಡಿಸಿಎಂರನ್ನು ಯಾವಾಗಲೂ ನಾವು ಭೇಟಿ ಮಾಡುತ್ತಿರುತ್ತೇವೆ.  ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಲು ಸಮಯ ಕೇಳುತ್ತೇವೆ.  ಸಮಯ ನೀಡಿದರೆ ಭೇಟಿ ಮಾಡುತ್ತೇವೆ.  ಅಧಿವೇಶನ ನಡೆಯಲಿದೆ ಆ ಸಮಯದಲ್ಲಿ ಪ್ರಯತ್ನ ಮಾಢುತ್ತೇವೆ ಎಂದು ಟಿಬಿ ಜಯಚಂದ್ರ ತಿಳಿಸಿದರು.

Key words: Cabinet,  reshuffle, demands, MLA ,T.B. Jayachandra