ನವದೆಹಲಿ, ಏಪ್ರಿಲ್ 𝟭𝟯: ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (𝗦𝘂𝗽𝗿𝗲𝗺𝗲 𝗖𝗼𝘂𝗿𝘁 𝗼𝗳 𝗜𝗻𝗱𝗶𝗮) ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ (𝗜𝗻𝘁𝗲𝗿𝗶𝗺 𝗦𝘁𝗮𝘆) ನೀಡಿದೆ.
ಬಟ್ಟೆ ಚೀಲಗಳ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸೂಚಿಸಿ, ಮಾರ್ಚ್ 𝟮𝟳, 𝟮𝟬𝟮𝟲 ರಂದು ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಈ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದೆ.
ಇಂದಿನ ವಿಚಾರಣೆಯ ವೇಳೆ, ಕಾನೂನಿನ ಮೂಲಭೂತ ಪ್ರಶ್ನೆಗಳು ಹಾಗೂ ಕಾರ್ಯವಿಧಾನದ ನ್ಯಾಯಸಮ್ಮತತೆಯ (𝗣𝗿𝗼𝗰𝗲𝗱𝘂𝗿𝗮𝗹 𝗙𝗮𝗶𝗿𝗻𝗲𝘀𝘀) ಕುರಿತಾದ ಪ್ರಮುಖ ವಾದಗಳನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತು. ಈ ಹಿಂದಿನ ಹೈಕೋರ್ಟ್ ಪ್ರಕ್ರಿಯೆಗಳನ್ನು ನಡೆಸುವಾಗ ಅರ್ಜಿದಾರರ ಕುರಿತಂತೆ ಸಂಪೂರ್ಣವಾಗಿ ಏಕಪಕ್ಷೀಯವಾಗಿ (𝗘𝘅-𝗽𝗮𝗿𝘁𝗲) ನಡೆಸಲಾಗಿದೆ ಎಂಬುದನ್ನು ರೋಹಿಣಿ ಸಿಂಧೂರಿ ಪರ ವಕೀಲರು ತಮ್ಮ ವಿಶೇಷ ಅರ್ಜಿಯ (𝗦𝗽𝗲𝗰𝗶𝗮𝗹 𝗟𝗲𝗮𝘃𝗲 𝗣𝗲𝘁𝗶𝘁𝗶𝗼𝗻) ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

ರಿಟ್ (𝗪𝗿𝗶𝘁) ಪ್ರಕ್ರಿಯೆಗಳಲ್ಲಿ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿರಲಿಲ್ಲ ಮತ್ತು ಅವರ ವಿರುದ್ಧ ದಂಡನಾತ್ಮಕ ನಿರ್ದೇಶನಗಳನ್ನು ನೀಡುವ ಮೊದಲು ಅವರ ಅಹವಾಲುಗಳನ್ನು ಆಲಿಸಲು ಅವಕಾಶವನ್ನು ನೀಡಲಾಗಿರಲಿಲ್ಲ. ಇದು ನೈಸರ್ಗಿಕ ನ್ಯಾಯ (𝗡𝗮𝘁𝘂𝗿𝗮𝗹 𝗝𝘂𝘀𝘁𝗶𝗰𝗲) ಹಾಗೂ ಸಂವಿಧಾನದ 𝟭𝟰 ನೇ ವಿಧಿಯ (𝗔𝗿𝘁𝗶𝗰𝗹𝗲 𝟭𝟰) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರೋಹಿಣಿ ಸಿಂಧೂರಿ ಪರ ವಕೀಲರು ಗೌರವಪೂರ್ವಕವಾಗಿ ನ್ಯಾಯಾಲಯದ ಗಮನವನ್ನು ಸೆಳೆದರು.

ಇದಲ್ಲದೆ, ರೋಹಿಣಿ ಸಿಂಧೂರಿ ಪರ ವಕೀಲರು, ಬಟ್ಟೆ ಚೀಲಗಳ ಖರೀದಿಯ ಆರೋಪಗಳ ಕುರಿತು ವಾಸ್ತವಿಕ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಪ್ರಕರಣದಲ್ಲಿಸರ್ಕಾರಿ ಬೊಕ್ಕಸಕ್ಕೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ (𝗭𝗲𝗿𝗼 𝗙𝗶𝗻𝗮𝗻𝗰𝗶𝗮𝗹 𝗟𝗼𝘀𝘀) ಎಂಬುದನ್ನು ಅವರು ತಿಳಿಸಿದರು. ಏಪ್ರಿಲ್ 𝟮𝟬𝟮𝟭 ರಲ್ಲಿ ಕಾರ್ಯಾದೇಶ (𝗪𝗼𝗿𝗸 𝗢𝗿𝗱𝗲𝗿) ನೀಡಲಾಗಿದ್ದರೂ, ಕೋವಿಡ್-𝟭𝟵 (𝗖𝗢𝗩𝗜𝗗-𝟭𝟵) ಸಾಂಕ್ರಾಮಿಕ ರೋಗದ ಹರಡುವಿಕೆಯಿಂದಾಗಿ ಬಟ್ಟೆ ಚೀಲಗಳ ಖರೀದಿಯೇ ನಡೆದಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯದ ದಾಖಲೆಗೆ ಒದಗಿಸಲಾಯಿತು.
ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಹಣದ ಪಾವತಿಯಾಗಿಲ್ಲ ಮತ್ತು ಆರ್ಥಿಕ ವಹಿವಾಟು ನಡೆದಿಲ್ಲ ಎಂಬುದನ್ನು ಅಧಿಕೃತ ದಾಖಲೆಗಳು ದೃಢಪಡಿಸುತ್ತವೆ. ಹೀಗಾಗಿ ಆರ್ಥಿಕ ನಷ್ಟದ ಆರೋಪಗಳು ಸಂಪೂರ್ಣ ಕಾಲ್ಪನಿಕವಾಗಿವೆ. ಅವರ ಅಧಿಕಾರಾವಧಿಯಲ್ಲಿ ಬಟ್ಟೆ ಚೀಲಗಳ ಪೂರೈಕೆಯಾಗಲೀ ಅಥವಾ ಹಣ ಪಾವತಿಯಾಗಲೀ ನಡೆಯದ ಕಾರಣ, ಯಾವುದೇ ವಹಿವಾಟು ನಡೆದಿಲ್ಲ. ಆದ್ದರಿಂದ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ (𝗣𝗿𝗲𝘃𝗲𝗻𝘁𝗶𝗼𝗻 𝗼𝗳 𝗖𝗼𝗿𝗿𝘂𝗽𝘁𝗶𝗼𝗻 𝗔𝗰𝘁 – 𝗣𝗖 𝗔𝗰𝘁) ಅಡಿಯಲ್ಲಿ ಮೇಲ್ನೋಟದ ಪ್ರಕರಣವು (𝗣𝗿𝗶𝗺𝗮 𝗙𝗮𝗰𝗶𝗲 𝗖𝗮𝘀𝗲) ಸಾಬೀತಾಗುವುದಿಲ್ಲ ಎಂದು ರೋಹಿಣಿ ಸಿಂಧೂರು ಪರ ವಕೀಲರು ಪ್ರತಿಪಾದಿಸಿದರು.

ಈ ವಿಷಯದ ಬಗ್ಗೆ ಈಗಾಗಲೇ ಸಮಗ್ರ ನ್ಯಾಯಾಂಗ ತನಿಖೆಯ ಕುರಿತೂ ಸುಪ್ರೀಂ ಕೋರ್ಟ್‌ಗೆ (𝗔𝗽𝗲𝘅 𝗖𝗼𝘂𝗿𝘁) ಮಾಹಿತಿ ನೀಡಲಾಯಿತು. ನಿವೃತ್ತ ನ್ಯಾಯಾಧೀಶರು ನಡೆಸಿದ ವಿಸ್ತೃತ ಇಲಾಖಾ ವಿಚಾರಣೆಯಲ್ಲಿ (𝗗𝗲𝗽𝗮𝗿𝘁𝗺𝗲𝗻𝘁𝗮𝗹 𝗘𝗻𝗾𝘂𝗶𝗿𝘆) ಈ ಆರೋಪಗಳನ್ನು ಈ ಮೊದಲೇ ಪರಿಶೀಲಿಸಲಾಗಿತ್ತು. 𝟭𝟲 ಸಾಕ್ಷಿಗಳು ಹಾಗೂ 𝟱𝟰 ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ದೋಷಾರೋಪಣೆಯನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಎಲ್ಲಾ ಆರೋಪಗಳು “ಸಾಬೀತಾಗಿಲ್ಲ” (𝗡𝗼𝘁 𝗣𝗿𝗼𝘃𝗲𝗱) ಎಂದು ತನಿಖಾಧಿಕಾರಿಯು ನವೆಂಬರ್ 𝟮𝟬𝟮𝟰 ರಲ್ಲಿ ನಿರ್ಣಯಿಸಿದ್ದರು.
ಈ ಪ್ರಕ್ರಿಯೆಯ ನಂತರ, ರಾಜ್ಯ ಸರ್ಕಾರವು (𝗦𝘁𝗮𝘁𝗲 𝗚𝗼𝘃𝗲𝗿𝗻𝗺𝗲𝗻𝘁) ತನಿಖಾ ವರದಿಯನ್ನು ಅಧಿಕೃತವಾಗಿ ಅಂಗೀಕರಿಸಿತ್ತು ಮತ್ತು ಏಪ್ರಿಲ್ 𝟭𝟭, 𝟮𝟬𝟮𝟱 ರಂದು ಅಧಿಕಾರಿಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿತ್ತು, ಎನ್ನುವುದನ್ನು ನ್ಯಾಯಾಲಯಕ್ಕೆ ತಿಳಿಸಿದರು.
Key words: The Supreme Court of India, granted an interim stay,Karnataka High Court , senior IAS officer, Rohini Sindhuri.

SUMMARY:
New Delhi, April 13: The Supreme Court of India has granted an interim stay on the Karnataka High Court order against senior IAS officer Rohini Sindhuri.
The High Court had earlier directed registration of an FIR and prosecution over alleged cloth bag procurement irregularities (March 27, 2026). The Supreme Court stayed this order, noting concerns over procedural fairness and violation of natural justice, as the officer was not heard.

Her counsel argued there was no financial loss, no actual procurement, and no transaction occurred due to COVID-19. A prior departmental inquiry had already found the allegations “not proved”, and the state government had cleared her of all charges in April 2025.







