Monday, October 12, 2026

Dasara Wishes

Mysore dasara DasraWishes_JK DasraWishes JK
Happy Dasara
Home Front Page ‘ಕೈ’ ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ:  ದೆಹಲಿಗೆ 20ಕ್ಕೂ ಹೆಚ್ಚು ಶಾಸಕರು?

‘ಕೈ’ ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ:  ದೆಹಲಿಗೆ 20ಕ್ಕೂ ಹೆಚ್ಚು ಶಾಸಕರು?

ಬೆಂಗಳೂರು,ಏಪ್ರಿಲ್,11,2026 (www.justkannaa.in): ಸಚಿವ ಸಂಪುಟ ಪುನಾರಚನೆ ವಿಚಾರಕ್ಎಕ ಸಂಬಂಧಿಸಿದಂತೆ  ಕಾಂಗ್ರೆಸ್ ನಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.  ಉಪಚುನಾವಣೆ ಮುಗಿಯುತ್ತಿದ್ದಂತೆ ಅಲರ್ಟ್ ಆಗಿರುವ 20ಕ್ಕೂ ಹೆಚ್ಚು ಶಾಸಕರು ನಾಳೆ ದೆಹಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 17ರ ಬಳಿಕ ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಭೇಟಿಗೆ ತೆರಳುವ ಸಾಧ್ಯತೆ ಇದ್ದು ಸಿಎಂ ಡಿಸಿಎಂ ಭೇಟಿ ಮುನ್ನ ಕಾಂಗ್ರೆಸ್ ನ 20ಕ್ಕೂ ಹೆಚ್ಚು ಶಾಸಕರು ಅಶೋಕ್ ಪಟ್ಟಣ್ ಟಿ.ಬಿ ಜಯಚಂದ್ರ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಕಾರ್ಜುನ ಖರ್ಗೆ ವೇಣುಗೋಪಾಲ್ ರಾವ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನ ಭೇಟಿಯಾಗುವ ಸಾಧ್ಯತೆ ಇದೆ.

ಪಕ್ಷಕ್ಕಾಗಿ ದುಡಿದಿದ್ದೇವೆ.  ನಮಗೂ ಒಮ್ಮೆ ಸಚಿವರಾಗುವ ಆಸೆ ಇದೆ ಎರಡುವರೆ ವರ್ಷದ ಬಳಿಕ ಅವಕಾಶ ಕೊಡ್ತೀವಿ ಅಂತ ಹೇಳಲಾಗುತ್ತು.  ಸರ್ಕಾರ ರಚನೆಯಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ ಇನ್ನುಳಿದ ಎರಡು ವರ್ಷಕ್ಕಾದರೂ ನಮಗೆ ಸಚಿವ ಸ್ಥಾನ ನೀಡಿ ಈ ಸಂಬಂಧ ಸಂಫುಟ ಪುನರ್ ರಚನೆಗೆ ಸಿಎಂಗೆ ಸೂಚನೆ ನೋಡಿ  ಎಂದು ಶಾಸಕರು ಮನವಿ ಮಾಡಲಿದ್ದಾರೆ ಎನ್ನಲಾಗಿದೆ  ಕಳೆದ ತಿಂಗಳು ಬೌರಿಂಗ್ ಕ್ಲಬ್ ನಲ್ಲಿ ಶಾಸಕರು ಸಭೆ ನಡೆಸಿದ್ದರು 3 ರಿಂದ 6 ಬಾರಿ ಗೆದ್ದ ಶಾಸಕರು ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

Key words: Congress, Cabinet restructure, MLAs