ಚಿತ್ರದುರ್ಗ,ಏಪ್ರಿಲ್,10,2026 (www.justkannada.in): 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನೋರ್ವ ಅತ್ಯಾಚಾರವೆಸಗಿ ನಂತರ ಗರ್ಭಪಾತ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಹೆಚ್ ಒ ರಾಜಣ್ಣ ವಿರುದ್ದ ಈ ಆರೋಪ ಕೇಳಿ ಬಂದಿದೆ.
16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು ಗರ್ಭಿಣಿಯಾದ ನಂತರ ಆಕೆಗೆ ಗರ್ಭಪಾತ ಮಾಡಿಸಿ ಆರೋಪ ಹೆಚ್ ಒ ರಾಜಣ್ಣ ವಿರುದ್ದ ಕೇಳಿ ಬಂದಿದೆ. ಗರ್ಭಪಾತ ಮಾಡಿದ ವೈದ್ಯೆ ಶಂಕರಲಕ್ಷ್ಮಿ ಎಂಬುವವರ ವಿರುದ್ದ ದೂರು ದಾಖಲಿಸಲಾಗಿದೆ. ಮಕ್ಕಳ ರಕ್ಷಣಾಧಿಕಾರಿ ಈ ಕುರಿತು ದೂರು ನೀಡಿದ್ದು ತಳಕು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Minor girl, rape, accused, teacher, POCSO case







