MDA ನಿವೇಶನ ಹರಾಜು ;  ಬರೋಬ್ಬರಿ ₹156 ಕೋಟಿ ಆದಾಯ.

The Mysuru Development Authority (MDA) generated a massive ₹156 crore by auctioning 133 residential sites. While earlier auctions saw strong demand for Vijayanagar layouts, this time buyers shifted focus to Vasanthanagar, where sites were sold at around ₹8,000 per sq. ft. Dattagalli continued its premium appeal, with plots fetching between ₹12,000 and ₹15,000 per sq. ft. The auction reflects strong real estate demand and sustained investor confidence in Mysuru.

 

ಮೈಸೂರು, ಏಪ್ರಿಲ್ 9: ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ನಡೆಸಿದ ಇತ್ತೀಚಿನ ನಿವೇಶನ ಹರಾಜು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಒಟ್ಟು 133 ನಿವೇಶನಗಳ ಮಾರಾಟದ ಮೂಲಕ ಬರೋಬ್ಬರಿ ₹156 ಕೋಟಿ ಆದಾಯ ಸಂಗ್ರಹವಾಗಿದೆ.

ಹರಾಜಿನಲ್ಲಿ ವಿವಿಧ ಬಡಾವಣೆಗಳ ನಿವೇಶನಗಳಿಗೆ ಸ್ಪರ್ಧಾತ್ಮಕ ಬೇಡಿಕೆ ಕಂಡುಬಂದಿದ್ದು, ವಿಶೇಷವಾಗಿ ವಸಂತನಗರ ಬಡಾವಣೆಯ ಕಡೆ ಖರೀದಿದಾರರು ಹೆಚ್ಚು ಮುಖಮಾಡಿದ್ದಾರೆ. ಇಲ್ಲಿ ಚದರ ಅಡಿಗೆ ಸುಮಾರು ₹8,000 ದರದಲ್ಲಿ ನಿವೇಶನಗಳು ಹರಾಜಾಗಿವೆ ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್‌ “ ಜಸ್ಟ್‌ ಕನ್ನಡ”  ಗೆ ಮಾಹಿತಿ ನೀಡಿದರು.

ಇನ್ನೊಂದೆಡೆ, ಎಂದಿನಂತೆ ದಟ್ಟಗಳ್ಳಿ ಬಡಾವಣೆಯ ನಿವೇಶನಗಳು ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿವೆ. ಈ ಪ್ರದೇಶದಲ್ಲಿ ಚದರ ಅಡಿಗೆ ₹12,000ರಿಂದ ₹15,000ರವರೆಗೆ ದರ ದಾಖಲಾಗಿದ್ದು, ಪ್ರೀಮಿಯಂ ವಸತಿ ಪ್ರದೇಶವೆಂಬ ಹೆಗ್ಗಳಿಕೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ಕಳೆದ ಹರಾಜಿನಲ್ಲಿ ವಿಜಯನಗರ ಬಡಾವಣೆಯ ನಿವೇಶನಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದ್ದರೆ, ಈ ಬಾರಿ ವಸಂತನಗರ ಬಡಾವಣೆ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ.

ಒಟ್ಟಾರೆ, MDA ಹರಾಜು ಪ್ರಕ್ರಿಯೆ ಮೈಸೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಚುರುಕಿನ ಚಲನವಲನವನ್ನು ಸೂಚಿಸುತ್ತಿದ್ದು, ಹೂಡಿಕೆದಾರರ ವಿಶ್ವಾಸ ಇನ್ನೂ ಬಲವಾಗಿರುವುದು ಸ್ಪಷ್ಟವಾಗಿದೆ.

ಆಶ್ಚರ್ಯಕರ ಅಂಶ:

ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ನಡೆಸಿದ ನಿವೇಶನ ಹರಾಜಿನಲ್ಲಿ ಕೆಲವು ಆಶ್ಚರ್ಯಕರ ಅಂಶಗಳು ಹೊರಬಿದ್ದಿವೆ. ಒಟ್ಟು ಹರಾಜಿನಲ್ಲಿ 21 ನಿವೇಶನಗಳಿಗೆ ಕೇವಲ ಒಂದೇ ಬಿಡ್ ದಾಖಲಾಗಿದ್ದು, ಇನ್ನೂ 33 ನಿವೇಶನಗಳಿಗೆ ಯಾವುದೇ ಖರೀದಿದಾರರು ಮುಂದೆ ಬರದಿರುವುದು ಗಮನಾರ್ಹವಾಗಿದೆ.

ಆದರೆ, ದಟ್ಟಗಳ್ಳಿ ಹಾಗೂ ವಸಂತನಗರ ಬಡಾವಣೆಗಳಲ್ಲಿ 30×40 ಅಳತೆಯ ನಿವೇಶನಗಳು ಕೋಟಿ ರೂ. ಮೀರಿದ ದರದಲ್ಲಿ ಹರಾಜಾಗಿದ್ದು, ಈ ಪ್ರದೇಶಗಳ ಮೇಲಿನ ಬೇಡಿಕೆ ಇನ್ನೂ ಗಟ್ಟಿಯಾಗಿರುವುದನ್ನು ತೋರಿಸಿದೆ.

ಈ ಕುರಿತು ಮಾಹಿತಿ ನೀಡಿದ MDA ಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಬೆಟ್ಟಸ್ವಾಮಿ, ಹರಾಜಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆಯಾದರೂ, ಪ್ರಮುಖ ಬಡಾವಣೆಗಳಲ್ಲಿ ಉನ್ನತ ದರ ದಾಖಲಾಗಿರುವುದು ಗಮನಾರ್ಹವೆಂದರು.

Key words: The Mysuru Development Authority, MDA, generated a massive ₹156 crore, auctioning 133 residential sites.

SUMMARY: 

Mysuru, April 9: The Mysuru Development Authority (MDA) generated a massive ₹156 crore by auctioning 133 residential sites.

While earlier auctions saw strong demand for Vijayanagar layouts, this time buyers shifted focus to Vasanthanagar, where sites were sold at around ₹8,000 per sq. ft. Dattagalli continued its premium appeal, with plots fetching between ₹12,000 and ₹15,000 per sq. ft. The auction reflects strong real estate demand and sustained investor confidence in Mysuru.

The Mysuru Development Authority (MDA) site auction revealed mixed trends. As many as 21 sites received only a single bid, while 33 sites failed to attract any bidders, indicating uneven demand.

However, in prime layouts like Dattagalli and Vasanthanagar, 30×40 sites crossed the ₹1 crore mark, highlighting strong demand in premium areas.

MDA Assistant Executive Engineer (AEE) Bettaswamy stated that while the auction saw mixed response overall, high-value bids in key localities remain a positive sign.