ಬೆಂಗಳೂರು,ಏಪ್ರಿಲ್,9,2026 (www.justkannada.in): ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೇ ಅರ್ಜಿ ಸಲ್ಲಿಸಿ 15 ದಿನಗಳಲ್ಲಿ ಕಾರ್ಡ್ ವಿತರಣೆ ಮಾಡುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಈ ಕುರಿತು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ. ಸದನದಲ್ಲಿ ಕೂಡ ಇದಕ್ಕೆ ಉತ್ತರ ನೀಡಿದ್ದೇನೆ. ಒಂದು ವೇಳೆ ರದ್ದಾಗಿದ್ದರೆ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿ 15 ದಿನದೊಳಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದರು.
ಎಪಿಎಲ್ ಕಾರ್ಡ್ ಗಳಿಗೂ ಸಾಕಷ್ಟು ಜನರು ಅರ್ಜಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಹೇಳಿದಂತೆ ಪರಿಷ್ಕರಣೆ ಮಾಡುತ್ತಿದ್ದೇವೆ 14 ಲಕ್ಷ ಎಪಿಎಲ್ ಕಾರ್ಡ್ ನವರು ಬಿಪಿಎಲ್ ನಲ್ಲಿ ಇದ್ದಾರೆ. ಹಂತ ಹಂತವಾಗಿ ತೊಂದರೆ ಆಗದಂತೆ ಕಾರ್ಡ್ ಪರಿಷ್ಕರಣೆ ಮಾಡುತ್ತೇವೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
Key words: BPL cards, cancel, apply, Minister, KH Muniyappa







