ಹಸೆಮಣೆ ಏರಬೇಕಿದ್ದ ಯುವಕನ ದುರಂತ ಅಂತ್ಯ: ಜಾತ್ರೆ ನೋಡಲು ಹೋಗಿ ಸಾವು

ಬೆಂಗಳೂರು​​, ಏಪ್ರಿಲ್​​,9,2026 (www.justkannada.in): ಹಸೆಮಣೆ ಏರಬೇಕಿದ್ದ ಯುವಕ ಜಾತ್ರೆ ನೋಡಲು ಹೋಗಿ ಟ್ಯಾಕ್ಟರ್ ಡಿಕ್ಕಿಯಿಂದಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್ ನ ಹುಳಿಮಾವು ಜಾತ್ರೆಯಲ್ಲಿ ನಡೆದಿದೆ.

ಬನಶಂಕರಿ  ನಿವಾಸಿ ಅಕ್ಷತ್ (27) ಮೃತಪಟ್ಟ ಯುವಕ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಿನ್ನೆ ನಡೆದಿದ್ದು, ರಥೋತ್ಸವ ಹಿನ್ನಲೆ ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಅಕ್ಷತ್ ಮೇಲೆ ಟ್ರ್ಯಾಕ್ಟರ್​​ ಹರಿದು ಅಕ್ಷತ್ ಗಂಭೀರ ಗಾಯಗೊಂಡಿದ್ದರು.  ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಮಾರ್ಗ ಮಧ್ಯೆಯೇ  ಸಾವನ್ನಪ್ಪಿದ್ದಾರೆ.

ಅಕ್ಷತ್​​, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ವಿತರಿಸಲೆಂದು ಬಂದಿದ್ದರು. ಈ ವೇಳೆ ಜಾತ್ರೆಯನ್ನೂ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಈ ದುರಂತ ಸಂಭವಿಸಿದ್ದು, ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: young man, died, Accident, fair