ಮೈಸೂರು, ಏ.೦೮,೨೦೨೬: ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಪಾರಂಪರಿಕ ಕಟ್ಟಡವಾದ “ ಜಯಲಕ್ಷ್ಮೀ ವಿಲಾಸ ಅರಮನೆʼ ಯನ್ನ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಬಗ್ಗೆ ಯೋಚನೆ ನಡೆಸುವುದೇ ಅಪರಾಧ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್.ರಂಗಪ್ಪ ಅವರು ಹೇಳಿರುವುದಿಷ್ಟು…
೧೦ ಎಕರೆ ವಿಸ್ತೀರ್ಣದಲ್ಲಿರುವ ಈ ಅರಮನೆ ಕಟ್ಟಡ ಮಾನಸ ಗಂಗೋತ್ರಿಯ ಆಕರ್ಷಣೆಯ ಕೇಂದ್ರ ಬಿಂದು. ಇದು ಮೈಸೂರನ್ನಾಳಿದ ಮಹಾರಾಜರ ವಂಶದ ಕುರುಹು. ಇಂಥ ಪ್ರತಿಷ್ಠಿತ ಕಟ್ಟಡ ವಿಶ್ವವಿದ್ಯಾನಿಲಯದ ಆವರಣದಲ್ಲಿರುವುದು ಹೆಮ್ಮೆಯ ಸಂಗತಿ. ಇದರ ಮಹತ್ವ ಅರಿಯದೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಬಗ್ಗೆ ಆಲೋಚಿಸಿದ್ದೆ ತಪ್ಪು.

ಈ ಅರಮನೆಯನ್ನು“೪೦ ವರ್ಷಕ್ಕೆ ಫ್ರೀ ಲೀಜ್ (ಉಚಿತ ಗುತ್ತಿಗೆ )ಕೊಡೋದು ಅಂದ್ರೆ ಅರ್ಥ ಏನು?” ವಿಶ್ವವಿದ್ಯಾಲಯದ ಆಸ್ತಿಯನ್ನು ಈ ರೀತಿಯಾಗಿ ಹಸ್ತಾಂತರಿಸುವುದು ಅಪಾಯಕಾರಿ.
ಈ ಹಿಂದೆ ನಾನು ಮೈಸೂರು ವಿವಿ ಕುಲಪತಿಯಾಗಿದ್ದಾಗಲೂ “ಕುಕ್ಕರಹಳ್ಳಿ ಕೆರೆ” ಯನ್ನು ಗುತ್ತಿಗೆ ನೀಡುವಂತೆ ಹಲವರು ಕೇಳಿದ್ದರು. ಮಾತ್ರವಲ್ಲದೆ ಪ್ರಭಾವ, ಒತ್ತಡ ಹಾಕಿಸಿದ್ದರು. ಆದರೆ ನಾನು ಇದ್ಯಾವುದಕ್ಕೂ ಬಗ್ಗದೆ , ಅದು ನಮ್ಮ ಸ್ವತ್ತು ಎಂದು ಹೇಳಿ ಆ ವಿಷಯದ ಕುರಿತಾದ ಯಾವುದೇ ಚರ್ಚೆಗೂ ಅವಕಾಶ ಕೊಡಲಿಲ್ಲ.

ಈ ಹಿಂದೆ ಒಮ್ಮೆ ಕೊಟ್ಟ “ ಪೆಟ್ರೋಲ್ ಬಂಕ್” ಸ್ಥಳವನ್ನೇ ೫೦ ವರ್ಷ ಕಳೆದರೂ ಮರಳಿ ವಿವಿ ಸುಪರ್ದಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಪ್ರೀಮಿಯರ್ ಸ್ಟೂಡಿಯೋಸ್ ಎದುರಿನ “ ವಯಸ್ಕರ ಶಿಕ್ಷಣ ಸಂಸ್ಥೆಗೆ” ನೀಡಿದ್ದ ಜಾಗವಿರಬಹುದು, ಖಾಸಗಿ ವ್ಯಕ್ತಿಗೆ ನೀಡಿದ ಸರಸ್ವತಿಪುರಂನ ವಿವಿ ಆಸ್ತಿ ಇರಬಹುದು ಈ ತನಕ ಇನ್ನು ಸುಪರ್ದಿಗೆ ಪಡೆಯಲು ಆಗಿಲ್ಲ ಎಂಬುದೇ ನಮ್ಮ ಕಣ್ಣ ಮುಂದಿರುವ ಜೀವಂತ ನಿರ್ದಶನ.
“ಯಾವತ್ತೂ ನಮ್ಮ ಮೈಸೂರು ವಿವಿ ಆಸ್ತಿಯನ್ನು ಕಳೆದುಕೊಳ್ಳಬಾರದು. ಇದು ವಿಶ್ವವಿದ್ಯಾಲಯಕ್ಕೆ ಮಾರಕ. ಈ ನಡೆ ಒಳ್ಳೆಯದಲ್ಲ” ಎಂದಿದ್ದಾರೆ.

ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿವಾದ :
ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕುರಿತ ವಿವಾದ ಮತ್ತೆ ತಲೆದೋರಿದ್ದು, ಹಿಂದಿನ ಆಡಳಿತದ ನಿರ್ಧಾರಗಳನ್ನು ಪ್ರಶ್ನಿಸುವ ಪ್ರಸ್ತುತ ಕುಲಪತಿ ಪ್ರೊ.ಲೋಕನಾಥ್ ಅವರ ನಿಲುವಿಗೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಸ್ಥಾಪನೆಗೆ ವಿಶೇಷ ಪ್ರಯತ್ನಗಳು ನಡೆಸಲಾಗಿತ್ತು. ಆರಂಭದಲ್ಲಿ ಸೆನೆಟ್ ಭವನದ ಕಟ್ಟಡಲ್ಲೇ ಈ ತರಗತಿಗಳು ನಡೆದಿದ್ದವು. ಆಗ ಅಗತ್ಯ ಮೂಲಸವಲತ್ತುಗಳಿಲ್ಲ ಎಂಬ ಕಾರಣದಿಂದ ಕೋರ್ಸ್ ಮುಂದುವರೆಸಲು ಅನುಮತಿ ನಿರಾಕರಿಸಲಾಯಿತು.
ಆ ಸಂದರ್ಭದಲ್ಲಿ ಸಂಸದರಾಗಿದ್ದ ಮಾಜಿ ಪ್ರಧಾನಮಂತ್ರಿ H. D. ದೇವೇಗೌಡ ಅವರ ಸಹಕಾರದಿಂದ ಸಂಬಂಧಪಟ್ಟ ಕಮಿಟಿಯ ಮುಖ್ಯಸ್ಥರಿಗೆ ಕೋರ್ಸ್ ಮುಂದುವರೆಸಲು ಅನುಮತಿ ನೀಡುವಂತೆ ಮನವಿ ಮಾಡಲಾಯಿತು. ಜತೆಗೆ ಒಂದು ವರ್ಷದೊಳಗೆ ಪ್ರತ್ಯೇಕ ಕಟ್ಟಡ ಹೊಂದುವ ಹಾಗೂ ಮೂಲ ಸವಲತ್ತು ಕಲ್ಪಿಸುವ ಆಶ್ವಾಸನೆ ನೀಡಲಾಯಿತು.

ಆರ್ಕಿಟೆಕ್ಟ್ ಸಂಸ್ಥೆಯ ಅಭಿವೃದ್ಧಿಗೆ ಆಸಕ್ತಿ ತೋರಿಸಿದ ಪರಿಣಾಮ ಕಮಿಟಿ ಚೇರ್ಮನ್‌ಗೆ ಅವರಿಗೆ ನೇರವಾಗಿ ಮನವಿ ಮಾಡಿದ್ದರಿಂದ ಆರ್ಕಿಟೆಕ್ಟ್ ಕೋರ್ಸ್ ಆರಂಭಕ್ಕೆ ಅನುಮತಿ ದೊರಕಿತು. ನೀಡಿದ ಭರವಸೆಯಂತೆ ಅತೀ ವಿಶಾಲವಾದ ಬೃಹತ್ ಕಟ್ಟಡವನ್ನು ನಿರ್ಮಿಸಿ ಅಲ್ಲಿಗೆ ಆರ್ಕಿಟೆಕ್ಟ್ ಕೋರ್ಸ್ ವಿಭಾಗವನ್ನು ಸ್ಥಳಾಂತರಿಸಲಾಯಿತು.
ಇದಕ್ಕಾಗಿ ದಾನಿಗಳಿಂದ ಆರ್ಥಿಕ ನೆರವು ಸಹ ಪಡೆದು ದೇಶದಲ್ಲೇ ವಿಶಿಷ್ಟ ಮಾದರಿಯ ಸ್ಕೂಲ್ ಆಫ್ ಆರ್ಕಿಟೆಕ್ಟ್ ಸಂಸ್ಥೆ ನಿರ್ಮಾಣ ಮಾಡಲಾಯಿತು. ಈ ವೇಳೆ ಅಲ್ಲಿ ಖಾಯಂ ಬೋಧಕ ಸಿಬ್ಬಂದಿ ( ಪರ್ಮನೆಂಟ್ ಫ್ಯಾಕಲ್ಟಿ) ಇಲ್ಲ ಎಂಬ ಕಾರಣಕ್ಕೆ ಟೀಕೆಗಳು ಕೇಳಿಬಂದಾಗ, ಸರ್ಕಾರದಿಂದ ಹಾಗೂ ರಾಜ್ಯಪಾಲರಿಂದ ಅನುಮತಿ ಪಡೆದು ಹುದ್ದೆ ಭರ್ತಿ ಮಾಡಲಾಯಿತು.
“ಕೌನ್ಸಿಲ್ ಆಫ್ ಆರ್ಕಿಟೆಕ್ಟ್ “ ನ ನಿಯಮದಂತೆ ಖಾಲಿ ಹುದ್ದೆಗಳನ್ನು ಜಾಹಿರಾತಿನ ಪ್ರಕಟಣೆ ನೀಡುವ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಅರ್ಹತೆ ಆಧಾರದ ಮೇಲೆ ನಿಯಮಾನುಸಾರವೇ ನೇಮಕ ಮಾಡಿಕೊಳ್ಳಲಾಯಿತು. ಆಮೂಲಕ ಖಾಯಂ ಸಿಬ್ಬಂದಿಯನ್ನು ನೇಮಕ ಮಾಡಲಾಯಿತು.
ಆದರೆ, ಇದ್ಯಾವುದರ ಅರಿವು ಇಲ್ಲದಂತೆ ಹಾಲಿ ಕುಲಪತಿಗಳು ಸಂಸ್ಥೆಯ ಸಿಬ್ಬಂದಿಗಳನ್ನು “ತಾತ್ಕಾಲಿಕ”ನೇಮಕ ಎಂದು ಕರೆಯುತ್ತಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಈ ಸಿಬ್ಬಂದಿಯನ್ನು “ಟೆಂಪ್ರವರಿ” ಎಂದು ಹೇಳಿ ಅವರ ಸಂಬಳವನ್ನು ಕಡಿತಗೊಳಿಸಿರುವುದು ನ್ಯಾಯಸಮ್ಮತವಲ್ಲ. ಈ ಬಗ್ಗೆ ಖುದ್ದು ಸಿಬ್ಬಂದಿ ವರ್ಗದವರೇ ಬಂದು ನನ್ನ ಬಳಿ ಅವರ ಅಳಲು ತೋಡಿಕೊಂಡಿದ್ದಾರೆ.
ವಿಶ್ವವಿದ್ಯಾನಿಲಯದ ಕೋರ್ಸ್ ಗಳಿಗೆ ಸಂಬಂಧಿಸಿದಂತೆ“ಎಲ್ಲವನ್ನೂ ಮುಚ್ಚಬೇಕು” ಎನ್ನುವ ಉಪಕುಲಪತಿಗಳ ಮನೋಭಾವ ಸರಿಯಲ್ಲ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ನಾವು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿರಬೇಕೇ?” ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದಿದ್ದಾರೆ.
KEY WORDS: “Jayalakshmi Vilas Palace”, leased to private company, Retired Vice Chancellor, Prof. K.S. Rangappa, objects!

SUMMARY:
“Jayalakshmi Vilas Palace” leased to private company; Retired Vice Chancellor Prof. K.S. Rangappa objects!
Retired Vice-Chancellor Prof. K.S. Rangappa has strongly criticized the very idea of leasing the heritage building “Jayalakshmi Vilas Palace” located in the Manasagangotri campus to private parties for a long term, calling it unacceptable.
In a press statement, Prof. K.S. Rangappa said:

The palace, spread over 10 acres, is the central attraction of Manasagangotri. It stands as a symbol of the royal legacy of the Mysore Maharajas. It is a matter of pride that such a prestigious structure exists within the university campus. Considering leasing it to a private entity without understanding its significance is a mistake.
“What does it even mean to give this palace on a ‘40-year free lease’?” he questioned. Handing over university property in such a manner is dangerous.







