Wednesday, October 7, 2026

BDA Apartments

Selfless service BDA JK_Adv BDA Adv
Home Front Page ಸಿಎಂಗೆ ಅಭಿವೃದ್ದಿ ಮಾಡಲು ಸಾಧ್ಯವಾಗಲ್ಲ: ಬರೀ ಗ್ಯಾರಂಟಿ ಮುಂದಿಟ್ಟುಕೊಂಡು ಚುನಾವಣೆಗೆ- ಬಿವೈ ವಿಜಯೇಂದ್ರ

ಸಿಎಂಗೆ ಅಭಿವೃದ್ದಿ ಮಾಡಲು ಸಾಧ್ಯವಾಗಲ್ಲ: ಬರೀ ಗ್ಯಾರಂಟಿ ಮುಂದಿಟ್ಟುಕೊಂಡು ಚುನಾವಣೆಗೆ- ಬಿವೈ ವಿಜಯೇಂದ್ರ

ದಾವಣಗೆರೆ, ಏಪ್ರಿಲ್,6,2026 (www.justkannada.in):  ಅವಕಾಶವಿದ್ದರೂ ಸಿಎಂ ಸಿದ್ದರಾಮಯ್ಯಗೆ  ಅಭಿವೃದ್ದಿ ಮಾಡಲು ಸಾಧ್ಯವಾಗಲಿಲ್ಲ. ಬರೀ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಉಪಚುನಾವಣೆಗೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಎರಡು ಕ್ಷೇತ್ರಗಳ ಉಚುನಾವಣೆ ಸಿಎಂ ಸಿದ್ದರಾಮಯ್ಯನವರ ನಿದ್ದೆಗೆಡಿಸಿದೆ. ಬರೀ ಗ್ಯಾರಂಟಿ ಮುಂದಿಟ್ಟುಕೊಂಡು ಚುನಾವಣೆಗೆ ಬಂದಿದ್ದಾರೆ. ಅವಕಾಶ ಇದ್ದರೂ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಮುಖವಾಡ ಹಾಕಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಸರ್ಕಾರದ ಮೇಲೆ ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಸಿಟ್ಟಿದೆ. ಯಾವ ಕ್ಷೇತ್ರದ ಉಳಿಸಿಕೊಳ್ಳಬೇಕು ಎಂಬುದು ಸಿಎಂಗೆ  ಆಗುತ್ತಿಲ್ಲ.  ಕಾರ್ಯಕರ್ತರ ಉತ್ಸಾಹ ನೋಡಿದರೆ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನ ಹಣದ ಆಮಿಷಕ್ಕೆ ಇಲ್ಲಿನ ಜನ ಒಳಗಾಗಲ್ಲ ದಾವಣಗೆರೆ ಬಾಗಲಕೋಟೆಯಲ್ಲಿ ಬಿಜೆಪಿ ಗೆಲ್ಲಲಿದೆ.  ಮುಸ್ಲೀ ಸಮುಯದಾಯದ ಜನ ಈ ಸಲ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Key words: CM, No development, Elections, guarantees, BY Vijayendra