ಶಾಮನೂರು ಮೊಮ್ಮಗನ ವಿರುದ್ದ ತಿರುಗಿ ಬಿದ್ದಿದ್ದಾರೆ: ಬಿಜೆಪಿ ಗೆಲುವು ನಿಶ್ಚಿತ- ಶ್ರೀರಾಮುಲು

ದಾವಣಗೆರೆ,ಏಪ್ರಿಲ್,3,2026 (www.justkannad.in): ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮೊಮ್ಮಗ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ವಿರುದ್ದ ಜನ ತಿರುಗಿಬಿದ್ದಿದ್ದಾರೆ. ಇಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ದಾವಣಗೆರೆಯಲ್ಲಿ ಮಾತನಾಡಿದ ಶ್ರೀರಾಮುಲು. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲತ್ತಾರೆ.  ಇಲ್ಲಿ ಬೆಣ್ಣೆದೋಸೆ ಫೇಮಸ್. ಬೆಣ್ಣೆ ದೋಸೆ ಮಾತ್ರ ಒಂದು ಕುಟುಂಬದ ಪಾಲಾಗುತ್ತಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಯಾವಾಗಲೂ ದಲಿತರ ವಿರುದ್ದ ಕೆಲಸ ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರನ್ನ   ಸೋಲಿಸಲು  ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ.  ಮಂತ್ರಿಗಳು ಸೂಟ್ ಕೇಸ್ ತಂದು ಕೂತಿದ್ದಾರೆ ಶಾಮನೂರು ಮೊಮ್ಮಗನ ವಿರುದ್ದ ಜನ ತಿರುಗಿಬಿದ್ದಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಸಿಎಂ ಆಗಲು ಸಿದ್ದರಾಮಯ್ಯ ಬಿಡುತ್ತಿಲ್ಲ ಎಂದು ಹೇಳಿದರು.

Key words: Davangere, by-election, Sriramulu