ಸರಕಾರಿ ಜಮೀನು ಖಾಸಗಿ ಪಾಲಾಗುವ ಯತ್ನ: ಅಗ್ರಿಮೆಂಟ್ ರದ್ದು, ಜಿಲ್ಲಾಡಳಿತದಿಂದ ಕ್ರಮ

ಮೈಸೂರು,ಏಪ್ರಿಲ್,3,2026 (www.justkannada.in):  ನಗರದ ಕುರುಬಾರಹಳ್ಳಿ ವ್ಯಾಪ್ತಿಯ ಸರ್ವೆ ನಂ.4ಕ್ಕೆ ಸಂಬಂಧಿಸಿದ ಯುಎಲ್‌ಸಿ (ULC) ಜಮೀನು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಗ್ರಿಮೆಂಟ್ ವಿವಾದದ ನಡುವೆಯೇ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ.

ಈ ಜಮೀನು ಕುರಿತಾಗಿ ಶಾಸಕ ಶ್ರೀವತ್ಸ ಅವರು ದಾಖಲೆ ಸಮೇತವಾಗಿ ಗಂಭೀರ ಆರೋಪಗಳನ್ನು ಹೊರ ಹಾಕಿದ್ದರು. ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಲು ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಗಮನ ಸೆಳೆದಿದ್ದರು.

ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ, ತಕ್ಷಣವೇ ಪರಿಶೀಲನೆ ನಡೆಸಿ ವಿವಾದಾತ್ಮಕ ಅಗ್ರಿಮೆಂಟ್ ಅನ್ನು ರದ್ದುಪಡಿಸಿದೆ. ಅಲ್ಲದೆ, ಆ ಜಮೀನು ಸರಕಾರಿ ಸ್ವತ್ತೆಂಬುದನ್ನು ಸ್ಪಷ್ಟಪಡಿಸುವಂತೆ ಆರ್‌ಟಿಸಿ (RTC) ದಾಖಲೆಗಳಲ್ಲಿ ಸರಕಾರಿ ಜಾಗ ಎಂದು ನಮೂದಿಸಲಾಗಿದೆ.

ಇದರೊಂದಿಗೆ ಸ್ಥಳದಲ್ಲೇ ಸರಕಾರಿ ಜಮೀನು ಎಂಬ ಫಲಕವನ್ನು ಅಳವಡಿಸುವ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜಮೀನು ವಿವಾದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದು, ಸಾರ್ವಜನಿಕ ವಲಯದಲ್ಲಿ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಪ್ರಯತ್ನಗಳನ್ನು ಕಟ್ಟಿಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ENGLISH SUMMARY…

Government Cancels Agreement in Mysuru ULC Land Dispute

Mysuru: The district administration has cancelled a विवादित agreement related to ULC land in Survey No. 4 at Kurubarahalli after allegations surfaced that government land was being diverted for private use.

MLA Srivatsa raised the issue with supporting documents, triggering swift action by authorities. Upon verification, officials confirmed the land as government property and updated RTC records accordingly.

A board has also been installed
declaring it as government land, effectively putting an end to the dispute.

Key words: privatize, government land, Agreement, cancelled, Mysore, district administration