ಮೈಸೂರು, ಏ.3,2026 (www.justkannada.in): ನಗರದ ಆರ್.ಟಿ.ನಗರ ಬಡಾವಣೆಯಲ್ಲಿ ಮಾನವೀಯತೆ ಮರೆತ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮೃತ ಹಸುವಿನ ಶವವನ್ನು ಯಾರೋ ದುರುಳರು ರಸ್ತೆ ಬದಿಯಲ್ಲೇ ಎಸೆದು ಹೋಗಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಹಸುವನ್ನು ಸರಿಯಾಗಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ತೋರಿರುವ ಪರಿಣಾಮ, ಬೀದಿ ನಾಯಿಗಳು ಹಸುವಿನ ದೇಹವನ್ನು ಕಚ್ಚಿ ತಿನ್ನುತ್ತಿರುವ ದೃಶ್ಯ ಭಯಾನಕ ಸ್ಥಿತಿ ನಿರ್ಮಾಣ ಮಾಡಿದೆ. ಹಸುವಿನ ಶವದಿಂದ ಉಂಟಾಗುತ್ತಿರುವ ತೀವ್ರ ದುರ್ವಾಸನೆ ಬಡಾವಣೆ ನಿವಾಸಿಗಳ ಬದುಕನ್ನೇ ದುಸ್ತರಗೊಳಿಸಿದೆ.
ಪ್ರತಿ ದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ನಿವಾಸಿಗಳು ಮೂಗಿಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಎದುರಿಸುತ್ತಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಹೆಚ್ಚಾಗಿದೆ. ಈ ಕುರಿತು ನಗರ ಪಾಲಿಕೆಯ ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆಯ ಕೊರತೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಕ್ರಮ ಕೈಗೊಂಡು ಶವವನ್ನು ತೆರವುಗೊಳಿಸಬೇಕು ಹಾಗೂ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Keywords: A shocking incident, of negligence, has been reported, Mysore.
SUMMARY:
A shocking incident of negligence has been reported.
Mysuru, April 3: A shocking incident of negligence has been reported in R.T. Nagar, where a dead cow was dumped on the roadside by miscreants, sparking public outrage.
Stray dogs were seen feeding on the carcass, creating a disturbing scene. The foul smell from the decomposing body has made life difficult for residents, who are forced to cover their noses while passing through the area.
Locals have slammed the authorities for their inaction and demanded immediate removal of the carcass, warning of serious health risks if the issue is not addressed promptly.







