ಬೆಂಗಳೂರು,ಏಪ್ರಿಲ್,2,2026 (www.justkannada.in): ಬಕೆಟ್ ನಲ್ಲಿ ಮಗು ಮುಳುಗಿ ಸಾವನ್ನಪ್ಪಿದ್ದರಿಂದ ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಂದ್ರಾ ಲೇಔಟ್ ನ ಭೈರವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. 11 ತಿಂಗಳ ಅಗಸ್ತ್ಯ ಮಗು ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದು ತಾಯಿ ಪ್ರತಿಭಾ (29) ಕೂಡ ನೇಣಿಗೆ ಶರಣಾಗಿದ್ದಾರೆ.
ಪ್ರತಿಭಾ ಹಾಗೂ ಪತಿ ಮಹಾಂತೇಶ್ ಸಾಫ್ಟ್ ವೆರ್ ಉದ್ಯೋಗಿಯಾಗಿದ್ದರು. ಪತಿ ಮಹಾಂತೇಶ್ ಕೆಲಸದ ನಿಮಿತ್ತ ಬೇರೆ ಕಡೆಗೆ ಹೋಗಿದ್ದರು. ಈ ವೇಳೆ ಮಗು ಮನೆಯಲ್ಲಿ ಬಕೆಟ್ ಬಿದ್ದು ಸಾವನ್ನಪ್ಪಿದ್ದು ಇದರಿಂದ ಮನನೊಂದ ಪ್ರತಿಭಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆದಿದೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಮೊದಲಿಗೆ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
Key words: Child, dies, drowning, bucket, mother, suicide







