ಬಿಜೆಪಿಗೆ ಮರಳುವ ಚಿಂತನೆ ಮಾಡಿಲ್ಲ: 2028ರ ಚುನಾವಣೆ ವೇಳೆಗೆ ತೀರ್ಮಾನ- ಎಸ್.ಟಿ ಸೋಮಶೇಖರ್

ಬೆಂಗಳೂರು,ಮಾರ್ಚ್,31,2026 (www.justkannadda.in): ನಾನು ಬಿಜೆಪಿಗೆ ಮರಳುವ ಚಿಂತನೆ ಮಾಡಿಲ್ಲ ಕಾಂಗ್ರೆಸ್ ಗೆ ಹೋಗುತ್ತೇನೆ. ಬಿಜೆಪಿಗೆ ಬರುತ್ತೇನೆ ಎಂದು ಹೇಳಿಲ್ಲ ಎಂದು ಶಾಸಕ ಎಸ್.ಟಿ ಸೋಮಶೇಖರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ನಾನು ಈಗ ಕ್ಷೇತ್ರದ ಶಾಸಕ ಕ್ಷೇತ್ರಕ್ಕೆ ಅನುದಾನ ತರುತ್ತಿದ್ದೇನೆ. 2028ರ ಚುನಾವಣೆ ವೇಳೆಗೆ ಎಲ್ಲಿಗೆ ಹೋಗಬೇಕೆಂದು ತೀರ್ಮಾನ ಮಾಡುತ್ತೇನೆ. ಬಿಜೆಪಿಗೆ ಮರಳುವ ಬಗ್ಗೆ ಬಿಎಸ್ ವೈಗೆ ಕೇಳುವ ಅವಶ್ಯಕತೆ ಇಲ್ಲ ಎಂದರು.

ಬಿಎಸ್ ವೈಗೆ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ನಮ್ಮ ಕ್ಷೇತ್ರದಲ್ಲಿ ನೈಸ್ ರಸ್ತೆ ಬಂದು ಮೂವತ್ತು ವರ್ಷ ಆಗಿದೆ. ನಮ್ಮ ಭಾಗದಲ್ಲಿ ನೈಸ್ ಸೇತುವೆಗಳು ಚಿಕ್ಕದಾಗಿವೆ. ನಾವು ಖೇಣಿಗೆ ಹೇಳಿ ಸಾಕಾಯಿತು ಅವರು ಜಗ್ಗುತ್ತಿಲ್ಲ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನೈಸ್ ಲೇಔಟ್ ಮಾಡಲಾಗುತ್ತಿದೆ ಈ ಬಗ್ಗೆ ಅಸೆಂಬ್ಲಿಯಲ್ಲಿ ಪ್ರತಿಸಲ ಕೇಳಿದ್ದೇನೆ. ಮೊನ್ನೆಯೂ ನೈಸ್ ಬಗ್ಗೆ ಪ್ರಸ್ತಾಪಿಸಿದ್ದೇನೆ.  ನಾನು ಪ್ರಸ್ತಾಪ ಮಾಡಿದರೆ ಇವರು ಹೊರಗಡೆ ಹೋಗುತ್ತಾರೆ. ನಾನು ಮನಸ್ಸು ಮಾಡಿದ್ರೆ ಉಚ್ಚಾಟನೆ ರದ್ದು ಮಾಡಿ ಮೂರು ದಿನದಲ್ಲಿ ಪಕ್ಷಕ್ಕೆ ವಾಪಸ್ ಬರಬಲ್ಲೆ ಎಂದು ಹೇಳಿದ್ದೆ ಅದಕ್ಕೆ ರುದ್ರೇಶ್ ಮತ್ತೆ ಯಾಕೆ ಬರುತ್ತೀರಾ ಬಿಎಸ್ ವೈ , ಬಿವೈ ವಿಜಯೇಂದ್ರ ಬೂಟ್ ನೆಕ್ಕಲು ಬರುತ್ತೀರಾ ಎಂದು ಕೇಳ್ತಾನೆ.  ನಮಗೆ ಸ್ವಾಭಿಮಾನ ಇಲ್ವಾ? ರುದ್ರೇಶ್ ವಿರುದ್ದ ಹಕ್ಕುಚ್ಯುತಿ ಮಂಡಿಸಲು ಪತ್ರ ಕೊಟ್ಟಿದ್ದೇನೆ ಮಾನನಷ್ಟ ಮೊಕದ್ದಮೆ ಹಾಕಲು ವಕೀಲರ ಜೊತೆಗೆ ಚರ್ಚಿಸಿದ್ದೇನೆ ಎಂದರು.

Key words: No return,  BJP, MLA, S.T. Somashekar