ಬೆಂಗಳೂರು,ಮಾರ್ಚ್,31,2026 (www.justkannada.in): ಗ್ಯಾಸ್ ಸಿಲಿಂಡರ್ ಸಿಗದ ಹೋಟೆಲ್ ನವರು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರು ಜಾರಿಗೆ ಉಜ್ವಲ ಹೋಯ್ತು, ಈಗ ಸೌದೆ ಯೋಜನೆ ಸ್ಟಾರ್ಟ್ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರದ ಅನೇಕ ತಪ್ಪಿನಿಂದ ಯುದ್ದದ ನೆಪದಲ್ಲಿ ರಾಜ್ಯದ ಹಲವೆಡೆ ನಾವು ಅನುಭವಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಫಾರಿನ್ ಪಾಲಿಸಿಯಿಂದ ನಾವೆಲ್ಲ ನರಳುತ್ತಿದ್ದೇವೆ. ಉಜ್ವಲ ಯೋಜನೆ ಹೋಯ್ತು ಸೌದೆ ಯೋಜನೆ ಪ್ರಾರಂಭಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ನವರು ಪರದಾಡುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಬಿಟ್ಟು ಸೌದೆ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ಬಂದಿದೆ. ಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕಲಾಗುತ್ತಿದೆ. 5 ಗ್ಯಾರಂಟಿಗಳನ್ನು ಕೊಟ್ಟು ನಾವು ಜನರ ಬದುಕಿನಲ್ಲಿ ಪಾಲುದಾರರಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Ujjwala plan, LPG Cylinder, DCM, DK Shivakumar







