ಏಪ್ರಿಲ್ 1 ಕೇಂದ್ರದ ಲೂಟಿ, ದರೋಡೆ ದಿನ: ಬೆಲೆ ಏರಿಕೆ ಮಾಡಿಯೇ ಮಾಡುತ್ತಾರೆ- ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಮಾರ್ಚ್,31,2026 (www.justkannada.in): ಏಪ್ರಿಲ್ 1 ಕೇಂದ್ರ ಸರ್ಕಾರದ  ಲೂಟಿ ದರೋಡೆ ದಿನವಾಗಿದೆ. ಕೇಂದ್ರ ಸರ್ಕಾರ ಏಪ್ರಿಲ್ 1 ರಂದು ಬೆಲೆ ಏರಿಕೆ ಮಾಡಿಯೇ ಮಾಡುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಬೆಲೆ ಏರಿಕೆ ಮೂಲಕ ಜನರ ಮೇಲೆ ದಾಳಿ ಮಾಡುತ್ತಿದೆ  ಏಪ್ರಿಲ್1 ಕೇಂದ್ರ ಸರ್ಕಾರದ  ಲೂಟಿ ದರೋಡೆ ದಿನವಾಗಿದೆ. ಏ.1 ರಂದು ಬೆಲೆ ಏರಿಕೆ ಮಾಡಿಯೇ ಮಾಡುತ್ತಾರೆ. ಬೆಲೆ ಏರಿಕೆ ಶಾಪದಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ತಿಳಿಸಿದರು.

ಹೈವೇ ಆಗುವ ಮೊದಲೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಹೈವೇಯಿಂದ 900 ಕೋಟಿ ಟೋಲ್ ಸಂಗ್ರಹವಾಗಿದೆ.  ಔಷಧಗಳ ಬೆಲೆ  ಮಾಡುತ್ತಿದ್ದಾರೆ. ಬಿಪಿ ಶುಗರ್ ಮಾತ್ರೆಗಳ ಬೆಲೆಯೂ ಏರಿಕೆಯಾಗತ್ತಿದೆ.  ಹಾರ್ಟ್ ಗೆ ಅಳವಡಿಸುವ ಸ್ಟಂಟ್ ಬೆಲೆ ಕೂಡ ನಾಳೆಯಿಂದ ಏರಿಕೆಯಾಗುತ್ತಿದೆ. ನಾಳೆಯಿಂದ ಅಗತ್ಯ ಔಷಧ  ಬೆಲೆ ಶೇ 12.12 ರಷ್ಟು ಏರಿಕೆಯಾಗುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.

Key words: April 1st, looting,, Central Government, Randeep Singh Surjewala