ಬೆಂಗಳೂರು,ಮಾರ್ಚ್,28,2026 (www.justkannada.in): ಇರಾನ್ ಭಾರತದ ಮಿತ್ರ ರಾಷ್ಟ್ರ. ಹೀಗಾಗಿ ನಮ್ಮ ಹಡಗುಗಳನ್ನು ಮಾತ್ರ ಬಿಡುತ್ತಿದ್ದಾರೆ. ಇಲ್ಲವಾಗಿದ್ದರೆ ನಮ್ಮ ಗತಿ ಏನಾಗುತ್ತಿತ್ತು? ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಪ್ರವಾಸ ಕೈಗೊಂಡಿದ್ದರು. ಮೋದಿ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಗಿದೆ. ತೈಲದ ಅಭಾವದಿಂದಾಗಿ ಕೈಗಾರಿಕೆಗಳಿಗೂ ಕಷ್ಟವಾಗಿದೆ ಎಂದರು.
ಇರಾನ್ ನಮಗೆ ಮಿತ್ರ ರಾಷ್ಟ್ರ. ನಮ್ಮ ಹಡಗುಗಳನ್ನು ಬಿಟ್ಟಿದ್ದಾರೆ. ಇಂದು ನಮಗೆ ಯಾವುದನ್ನೂ ನಿಲ್ಲಿಸಿಲ್ಲ. ಮೋದಿ ಅವರ ವಿದೇಶಾಂಗ ನೀತಿ ವಿಫಲವಾಗಿದೆ. ಯಾಕೆಂದರೆ ಮೋದಿಯವರದ್ದೇ ಪ್ರತ್ಯೇಕವಾದ ವಿದೇಶಾಂಗ ನೀತಿ. ಇರಾನ್ ಭಾರತದ ಮಿತ್ರ ರಾಷ್ಟ್ರವಾಗಿದ್ದಕ್ಕೆ ನಮ್ಮ ಹಡಗುಗಳನ್ನು ಮಾತ್ರ ಬಿಡುತ್ತಿದ್ದಾರೆ. ಇಲ್ಲವಾದಲ್ಲಿ ನಮ್ಮ ಗತಿ ಏನಾಗುತ್ತಿತ್ತು? ನಾವು ಕೂಡ ಚರಂಡಿಯಲ್ಲಿ ಗ್ಯಾಸ್ ಮಾಡಬೇಕಿತ್ತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: Iran allowing, our ships, India, Minister, M.B. Patil







