Sunday, September 27, 2026

BDA Apartments

ಬಾಗಲಕೋಟೆ ಬೈ ಎಲೆಕ್ಷನ್: ಸಚಿವ ಜಮೀರ್ ವಿರುದ್ದ ‘ಗೋ ಬ್ಯಾಕ್’ ಅಭಿಯಾನ BDA JK_Adv BDA Adv
Home Front Page ಬಾಗಲಕೋಟೆ ಬೈ ಎಲೆಕ್ಷನ್: ಸಚಿವ ಜಮೀರ್ ವಿರುದ್ದ ‘ಗೋ ಬ್ಯಾಕ್’ ಅಭಿಯಾನ

ಬಾಗಲಕೋಟೆ ಬೈ ಎಲೆಕ್ಷನ್: ಸಚಿವ ಜಮೀರ್ ವಿರುದ್ದ ‘ಗೋ ಬ್ಯಾಕ್’ ಅಭಿಯಾನ

ಬಾಗಲಕೋಟೆ,ಮಾರ್ಚ್,28,2026 (www.justkannada.in):  ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದ್ದು ಈ ಮಧ್ಯೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಮುಸ್ಲೀಂ ಸಮುದಾಯದ ಮುಖಂಡರೇ ಗೋ ಬ್ಯಾಕ್ ಅಭಿಯಾನ ನಡೆಸಿದ್ದಾರೆ.

ಅಂಜುಮನ್  ಕಮಿಟಿಗೆ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿ  ಸದಸ್ಯರು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಗೋಬ್ಯಾಕ್ ಅಭಿಯಾನ ನಡೆಸಿದ್ದಾರೆ.

ನಾವು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಮಾಢುತ್ತೇವೆ. ಆದರೆ ಜಮೀರ್ ಬಂದರೆ ಕಾಂಗ್ರೆಸ್ ಗೆ ವೋಟ್ ಮೈನಸ್ ಆಗಲಿವೆ.  ಪ್ರಚಾರಕ್ಕೆ ಜಮೀರ್ ಅಹ್ಮದ್ ಖಾನ್ ಬರುವುದು ಬೇಡ. ಅವರ ಬದಲು ರಿಜ್ವಾನ್ ಅರ್ಷಾದ್, ಸಲೀಂ ಅಹ್ಮದ್ ಬರಲಿ ಜಮೀರ್  ಬಂದರೆ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂಧು ಮುಸ್ಲೀಂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Key words: Bagalkot, by-election, Go back, campaign, Minister Jameer