Sunday, September 27, 2026

BDA Apartments

ತಂದೆಯ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ BDA JK_Adv BDA Adv
Home Front Page ತಂದೆಯ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ತಂದೆಯ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ಶಿವಮೊಗ್ಗ,ಮಾರ್ಚ್,28,2026 (www.justkannada.in):  ನಿನ್ನೆ ತಂದೆ ಸಾವು. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ. ದುಃಖದಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ. ಈ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ.

ಹೌದು, ಇಂದು ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ಇತ್ತು. ಈ ನಡುವೆ ಶಿವಮೊಗ್ಗ ತಾಲ್ಲೂಕಿನ ಮಂಡಘಟ್ಟ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ತನ್ನ ತಂದೆಯ ಸಾವಿನ ನೋವಿನಲ್ಲೇ ಇಂದು ಪರೀಕ್ಷೆ ಬರೆದಿದ್ದಾನೆ.

ನಿನ್ನೆ ಪ್ರೀತಂ ತಂದೆ ಮಂಜುನಾಥ್ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪ್ರೀತಂ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಗೈರಾಗಿದ್ದನು. ವಿಷಯ ತಿಳಿದ ಬಿಇಒ ರಮೇಶ್ ಅವರು ವಿದ್ಯಾರ್ಥಿ ಪ್ರೀತಂ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ನಂತರ ವಿದ್ಯಾರ್ಥಿ ಪ್ರೀತಂನನ್ನ ಜೀಪ್ ನಲ್ಲೇ ಆಯನೂರು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದರು. ಈ ಮೂಲಕ ತಂದೆಯ ಸಾವಿನ ದುಃಖದಲ್ಲೂ ಪ್ರೀತಂ ಪರೀಕ್ಷೆ ಬರೆದಿದ್ದಾನೆ.

Key words: father, death, Student, SSLC, exam