Saturday, August 22, 2026

BDA Apartments

Home Crime ಮೈಸೂರು: ದೆಹಲಿ ಪೊಲೀಸರಿಂದ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದವನ ಬಂಧನ

ಮೈಸೂರು: ದೆಹಲಿ ಪೊಲೀಸರಿಂದ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದವನ ಬಂಧನ

ಮೈಸೂರು,ಮಾರ್ಚ್,28,2026 (www.justkannada.in): ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್ ಬಂಧಿತ ಆರೋಪಿ. ಈತ ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತ 6 ನೇ ಕ್ರಾಸ್ ನ ಮನೆಯೊಂದರಿಂದ ಕಾರ್ಯಾಚರಣೆ ನಡೆಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟವಾಗುವ ಬೆದರಿಕೆ ಸಂದೇಶ ಬಂದು ಆತಂಕ ಸೃಷ್ಟಿಯಾಗಿತ್ತು.

ಒಂದೇ ತಿಂಗಳಿನಲ್ಲಿ ಹಲವು ಬಾರಿ ಮೇಲ್ ಮೂಲಕ ಸಂದೇಶ ರವಾನೆ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ  ಹುಸಿ ಬಾಂಬ್ ರೂವಾರಿಯನ್ನು ಬಂಧಿಸಲು ಮುಂದಾಗಿದ್ದು,  ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರತಂಡ ಧಿಢೀರ್ ದಾಳಿ ನಡೆಸಿ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸರಿಗೆ ವಿವಿ ಪುರಂ ಠಾಣೆ ಪೊಲೀಸರು ಸಾಥ್ ನೀಡಿದ್ದು, ಆರೋಪಿ ಶ್ರೀನಿವಾಸ್ ನನ್ನು ಹೆಚ್ಚಿನ ವಿಚಾರಣೆಗೆ ದೆಹಲಿ ಪೊಲೀಸರು ಕರೆದೊಯ್ದಿದ್ದಾರೆ ಎನ್ನಲಾಗಿದೆ.  ಆರೋಪಿ ಮನೆಯಲ್ಲಿದ್ದ  ಹಲವು ಸಿಮ್ ಗಳು ಹಾಗೂ ಲ್ಯಾಪ್ ಟ್ಯಾಪ್ ಸೀಜ್ ಮಾಡಲಾಗಿದೆ.

Key words: Mysore, Delhi Police, arrest, man, fake bomb, message