Friday, August 14, 2026

BDA Apartments

Home Front Page ಏಕ ವ್ಯಕ್ತಿ ಪೂಜೆ ಮಾಡಿ: ಆದ್ರೆ ಭ್ರಷ್ಟರನ್ನ ಪೂಜೆ ಮಾಡಬಾರದು- ಡಿಕೆಶಿ ಅದ್ಧೂರಿ ಸ್ವಾಗತಕ್ಕೆ ಪರೋಕ್ಷ...

ಏಕ ವ್ಯಕ್ತಿ ಪೂಜೆ ಮಾಡಿ: ಆದ್ರೆ ಭ್ರಷ್ಟರನ್ನ ಪೂಜೆ ಮಾಡಬಾರದು- ಡಿಕೆಶಿ ಅದ್ಧೂರಿ ಸ್ವಾಗತಕ್ಕೆ ಪರೋಕ್ಷ ಕಿಡಿಕಾರಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ…

ಬಳ್ಳಾರಿ,ಅ,26,2019(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅದ್ಧೂರಿ ಸ್ವಾಗತಕ್ಕೆ ಕಾರ್ಯಕರ್ತರು ಬೆಂಬಲಿಗರು ಸಜ್ಜಾಗಿದ್ದು, ಈ ಬಗ್ಗೆ ಪರೋಕ್ಷವಾಗಿ ಟೀಕಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಏಕ ವ್ಯಕ್ತಿಯನ್ನ ಪೂಜೆ ಮಾಡಿ. ಆದರೆ ಭ್ರಷ್ಟರನ್ನ ಪೂಜೆ ಮಾಡಬಾರದು ಎಂದು ಟಾಂಗ್ ನೀಡಿದ್ದಾರೆ.

ಬಳ್ಳಾರಿಯಲ್ಲಿ ಇಂದು ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿಂದೆ ಜೈಲಿಗೆ ಹೋದವರನ್ನು ಜನರು ಚುನಾವಣೆಗಳಲ್ಲಿ ಬಹಿಷ್ಕರಿಸುತ್ತಿದ್ದರು. ಶಿಕ್ಷೆಗೂ ಮುನ್ನ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಅಂತಹವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಅಧಿಕಾರದಲ್ಲಿರುವವರು  ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಧಿಕಾರದಲ್ಲಿ ಇರುವವರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು ಕಿಡಿಕಾರಿದರು.

ನಾವು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ. ಈ ವ್ಯವಸ್ಥೆ ಬದಲಾಗಬೇಕಿದೆ. ಜನರು ಬದಲಾಗಬೇಕಿದೆ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯೂ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆಯಲ್ಲಿ ಬರುತ್ತದೆ. ಭ್ರಷ್ಟಾಚಾರ ಇಂದು ಮಿತಿಮೀರಿ ಬೆಳೆಯುತ್ತಿದ್ದು, ಏಕವ್ಯಕ್ತಿ ಪೂಜೆಯನ್ನಾದರೂ ಮಾಡಿ, ಆದರೆ ಭ್ರಷ್ಟರನ್ನ ಪೂಜೆಮಾಡಬೇಡಿ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.

Key words: Retired Justice- Santosh Hegde –outrage-DK Shivakumar-welcome