Monday, September 28, 2026

BDA Apartments

ನಾಳೆಯಿಂದ IPL ಶುರು: ಶಾಸಕರಿಗೆ 2 ಟಿಕೆಟ್ ನೀಡಲು KSCA ಒಪ್ಪಿಗೆ BDA JK_Adv BDA Adv
Home Front Page ನಾಳೆಯಿಂದ IPL ಶುರು: ಶಾಸಕರಿಗೆ 2 ಟಿಕೆಟ್ ನೀಡಲು KSCA ಒಪ್ಪಿಗೆ

ನಾಳೆಯಿಂದ IPL ಶುರು: ಶಾಸಕರಿಗೆ 2 ಟಿಕೆಟ್ ನೀಡಲು KSCA ಒಪ್ಪಿಗೆ

ಬೆಂಗಳೂರು,ಮಾರ್ಚ್,27,2026 (www.justkannada.in): ನಾಳೆಯಿಂದ   ಐಪಿಎಲ್  ಹಂಗಾಮ ಶುರುವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಕಳೆದ ಬಾರಿಯ ಚಾಂಪಿಯನ್ ತಂಡ ಆರ್ ಸಿಬಿ ಮತ್ತು ಎಸ್ ಆರ್ ಎಚ್ ನಡುವೆ ಪಂದ್ಯ ನಡೆಯಲಿದ್ದು ಇದೀಗ ಶಾಸಕರಿಗೆ ಎರಡು ಟಿಕೆಟ್ ನೀಡಲು ಕೆಎಸ್ ಸಿಎ ಒಪ್ಪಿಗೆ ನೀಡಿದೆ. ಇಂದು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದರು.

ಮುಂದಿನ ದಿನಗಳಲ್ಲಿ ನಾಲ್ಕು  ಟಿಕೆಟ್ ನೀಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.  ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ನಿನ್ನೆ ಅಧಿವೇಶನದಲ್ಲಿ ಐಪಿಎಲ್ ಟಿಕೆಟ್ ವಿಚಾರವಾಗಿ ಪ್ರಸ್ತಾಪಿಸಿದ್ದರು. ಶಾಸಕರಿಗೆ 4 ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Key words: IPL, tomorrow, KSCA, 2 tickets, MLAs