ದಾವಣಗೆರೆ,ಮಾರ್ಚ್,25,2026 (www.justkannada.in): ಏಪ್ರಿಲ್ 9 ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ತಿಳಿಸಿದರು.
ಇಂದು ಮಾತನಾಡಿದ ಸಮರ್ಥ್ ಶಾಮನೂರು, ಅಲ್ಪಸಂಖ್ಯಾತರು ನಾಮಪತ್ರ ಹಿಂಪಡೆಯುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಒಂದು ರೀತಿ ಸಹೋದರರು ಇದ್ದಂತೆ. ಹೀಗಾಗಿ ನಾಳೇ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
ಅಬ್ದುಲ್ ಜಬ್ಬಾರ್ ಕೂಡ ಒಂದು ಪೋಸ್ಟ್ ಮಾಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದ ಎಂದಿದ್ದಾರೆ. ಇದು ಉತ್ತಮ ಬೆಳವಣಿಗೆ. 4 ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ನಿರಂತರವಾಗಿ ದುಡಿದಿದ್ದಾರೆ ಎಂದು ಸಮರ್ಥ್ ಶಾಮನೂರು ತಿಳಿಸಿದರು.
Key words: Davanagere, By-election, congress candidate, Samarth Shamanur







