Thursday, September 24, 2026

BDA Apartments

Home Front Page ‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,25,2026 (www.justkannada.in): ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ವೇಳೆ ಯಾರ್ಯಾರು ನಿಮ್ಮ ಹಿಂದೆ ಮುಂದೆ ಇದ್ದಾರೋ ಅವರಿಗೆ ನೀರು ಕುಡಿಸುತ್ತಿದ್ದೀರಿ ಎಂದು ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ  ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್,  ನಿಮ್ಮ ತಂದೆಯನ್ನ ಮೆಚ್ಚಬೇಕು. ದೂರದೃಷ್ಠಿಯಲ್ಲಿ ನೀರು ಕುಡಿಸುವುದನ್ನ ಹೇಳಿಕೊಟ್ಟಿದ್ದಾರೆ(ದನಕರುಗಳಿಗೆ ನೀರು ಕುಡಿಸಿದ್ದೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ) ಯಾರ್ಯಾರು ಹಿಂದೆ ಮುಂದೆ ಇದ್ದಾರೆ ಅವರಿಗೆ ನೀರು ಕುಡಿಸುತ್ತಿದ್ದಾರೆ ಕಳೆದು 8 ವರ್ಷಗಳಿಂದ ಸಿದ್ದರಾಮಯ್ಯ ಸಿಎಂ ಆಗಿ ಬರುತ್ತಿದ್ದಾರೆ. ಇವರದ್ದು ಯಾವುದೋ ಒಂದು ಸಿದ್ದಾಂತ ಇರಬೇಕು ನೀರು ಕುಡಿಸುವಾಗ ಸ್ವಲ್ಪ ಉಪ್ಪು ಖಾರ ಹಾಕಿ ಕುಡಿಸಿ ಎಂದು ಕಾಲೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನಾನು ದನಕರುಗಳಿಗೆ ನೀರು ಕುಡಿಸಿದ್ದನ್ನು ಹೇಳುತ್ತೀನಿ ನಿಮಗೆ ನೀರು ಕುಡಿಸಿದ್ದೀನಾ ಪ್ರಶ್ನಿಸಿದರು.

ಆಗ ಆರ್.ಅಶೋಕ್ ಪಕ್ಕದಲ್ಲಿಇರೋರಿಗೆ ನೀರು ಕುಡಿಸಿದ್ದೀರಿ ಅಂತಾ ಹೇಳಿದ್ದು ಎಂದರು. ಈ ವೇಳೆ ಸಿಎಂ ಸಿದ್ದರಾಮಯ್ಯ,  ಅವರು ನಮ್ಮ ಸಹಪಾಠಿ ಎಂದರು.  ನಾನು ವಿರೋಧಪಕ್ಷದವರಿಗೆ ರಾಜಕೀಯವಾಗಿ ನೀರು ಕುಡಿಸಿದ್ದೇನೆ ಇವರು ದನನೋ ಏನೂ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ರಾಜಕೀಯ ನೀರು ಕುಡಿಸಿದ್ದೆ ಅಂತ ನೀವು ಒಪ್ಪಿಕೊಂಡರಲ್ಲ ಪಕ್ಷದ ವಿಚಾರಗಳನ್ನ ನೋಡಲು ನಮ್ಮ ಹೈಕಮಾಂಡ್  ಇದೆ ರಾಜಕೀಯವಾಗಿ ವಿರೋಧ ಪಕ್ಷದವರಿಗೆ ನೀರು ಕುಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Key words: CM Siddaramaiah, R. Ashok, drink water, session