Thursday, August 13, 2026

BDA Apartments

Home Front Page ಇದು ತುಂಬಿದ ಕೊಡ, ಖಾಲಿ ಚೊಂಬು ಆಗಲು ಸಾಧ್ಯವಿಲ್ಲ- ಬಜೆಟ್ ಟೀಕಿಸಿದವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್

ಇದು ತುಂಬಿದ ಕೊಡ, ಖಾಲಿ ಚೊಂಬು ಆಗಲು ಸಾಧ್ಯವಿಲ್ಲ- ಬಜೆಟ್ ಟೀಕಿಸಿದವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್

ಬೆಂಗಳೂರು,ಮಾರ್ಚ್,25,2026 (www.justkannada.in): ಬಜೆಟ್ ಬಗ್ಗೆ ಟೀಕೆ ಮಾಡಿದ್ದೀರಿ. ಕ್ರೆಡಿಟ್ ಕಾರ್ಡ್  ಬಜೆಟ್ ಖಾಲಿ ಚೊಂಬು ಎಂದು ಹೇಳಿದ್ದೀರಿ.  ಇದು ತುಂಬಿದ ಕೊಡ ಖಾಲಿ ಚೊಂಬು ಆಗಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ನಾನು 17 ಬಾರಿ ಬಜೆಟ್ ಮಂಡಿಸಿ ಉತ್ತರ ಕೊಟ್ಟಿದ್ದೇನೆ. ಅದರೆ ಇಷ್ಟೊಂದು ಶಾಸಕರು ಮಾತನಾಡಿದ್ದು ಇದೇ ಮೊದಲು. ಈ ಬಾರಿ 50 ಶಾಸಕರು ಮಾತನಾಡಿದ್ದಾರೆ.  ಎಲ್ಲರಿಗೂ ಅವಕಾಶ ಕೊಟ್ಟ ಸ್ಪೀಕರ್ ಗೆ ಅಭಿನಂದನೆ. ಕೆಲವರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ವಿಮರ್ಶೆ ಮಾಡಿದ್ದಾರೆ. ಕೆಲವರು ಬಜೆಟ್ ಸ್ವಾಗತ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಬಹಳ ಟೀಕೆ ಮಾಡಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಕ ಹೆಡ್ ಲೈನ್ ಬರಲೇಂದು ಬಹಳ ಕಸರತ್ತು ಮಾಡಿ ಸಾಕಷ್ಟು ಪದಪುಂಜ ಬಳಸಿದ್ದಾರೆ. ಟೀಕಿಸಿದವರು ಸ್ವಾಗತಿಸಿದವರು ಸೇರಿ ಎಲ್ಲರಿಗೂ ಅಭಿನಂದನೆ ಎಂದರು.

ವಿಪಕ್ಷ ನಾಯಕರು ಬಜೆಟ್ ಬಗ್ಗೆ ಆಳವಾದ ಅಧ್ಯಯನ ಮಾಡಿಲ್ಲ. ಆಳವಾಗಿ ಅಧ್ಯಯನ ಮಾಡಿದ್ರೆ ಬಜೆಟ್ ತಿರುಳು ಗೊತ್ತಾಗುತ್ತಿತ್ತು. ಅವರು ಆಕರ್ಷಕ ಹೆಡ್ ಲೈನ್ ಬರುವ ಕಡೆಗೆ ಅಧ್ಯಯನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಏನೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣು ಆಗಲ್ಲ ಹಾಗೆಯೇ ಬೇವಿನ ಹಣ್ಣು ಮಾವಿನ ಹಣ್ಣು ಆಗಲು ಸಾಧ್ಯವಿಲ್ಲ.  ನಮ್ಮ ರಾಜ್ಯದ ಜನ ಬುದ್ದಿವಂತರಿದ್ದಾರೆ. ಹೀಗಾಗಿ ಮಾವಿ ಹಣ್ಣನ್ನು ಬೇವಿನ ಹಣ್ಣು ಎಂದು ಹೇಳುವುದಿಲ್ಲ ಎಂದು ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಕುಟುಕಿದರು.

Key words: CM, Siddaramaiah, Legislative Assembly, budget