ಬೆಂಗಳೂರು,ಮಾರ್ಚ್,10,2026 (www.justkannada.in): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಂಟಾಗಿದ್ದು ಇದರ ಪರಿಣಾಮವಾಗಿ ಭಾರತದಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದ್ದು ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ಮಹಿಳಾ ದಿನಾಚಾರಣೆಯಂದೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಸಂಸದರು ಯಾಕೆ ಮಾತನಾಡುತ್ತಿಲ್ಲ. ಇದು ಮೋದಿ ಅವರ ಕೊಡುಗೆ. ಅವರಿಗೆ ಅಭಿನಂದನೆಗಳು ಎಂದು ಗುಡುಗಿದ್ದಾರೆ.
Key words: Gas cylinder, price ,hike, DK Shivakumar







