Thursday, September 10, 2026

BDA Apartments

Home Front Page LPG ಸಿಲಿಂಡರ್ ಕೊರತೆ: ಕೇಂದ್ರದ ವಿರುದ್ದ ಯೂಥ್ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ

LPG ಸಿಲಿಂಡರ್ ಕೊರತೆ: ಕೇಂದ್ರದ ವಿರುದ್ದ ಯೂಥ್ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ

ಶಿವಮೊಗ್ಗ,ಮಾರ್ಚ್,10,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮದ ಬಿಸಿ ಭಾರತಕ್ಕೂ  ತಟ್ಟಿದ್ದು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು ಜೊತೆಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಮುಖವಾಡ ಧರಿಸಿ ಅಣಕು ಪ್ರದರ್ಶನ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಗೆ  ಪ್ರಧಾನಿ ಮೋದಿ ಭಾವಚಿತ್ರ  ಅಂಟಿಸಿ ರಸ್ತೆಯಲ್ಲಿ ಒಲೆ ಹೊತ್ತಿಸಿ ಅಡುಗೆ ಮಾಡಿ ಕಿಡಿಕಾರಿದ್ದಾರೆ.

ಈ ಮೂಲಕ ಇರಾನ್ ಮೇಲೆ ಇಸ್ರೇಲ್ ಅಮೇರಿಕಾ ದಾಳಿ ಸಂಘರ್ಷದಿಂದಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಭಾರತದ ಮೇಲೆ ಪರಿಣಾಮ ಬೀರಿದ್ದು ಹೋಟೆಲ್ ಗಳು ವಾಹನಗಳು  ಸಂಕಷ್ಟಕ್ಕೆ ಸಿಲುಕಿವೆ.

Key words: LPG, cylinder, shortage, Youth Congress, protest