ಬೆಂಗಳೂರು,ಮಾರ್ಚ್,10,2026 (www.justkannada.in): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದಾಳಿಯಿಂದಾಗಿ ಭಾರತ ಸೇರಿ ಇತರೇ ದೇಶಗಳ ಮೇಲೆ ಇದರ ಪರಿಣಾಮ ಬೀರುತ್ತಿದ್ದು ಈ ಹಿನ್ನೆಲೆಯಲ್ಲಿ ಇದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಚಿವ ಎಂ.ಸಿ ಸುಧಾಕರ್, ಅಮೆರಿಕಾ ಸರ್ವಾಧಿಕಾರ ನಡೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕಾ ನಡೆಯಿಂದ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರಿದೆ ಅಮೆರಿಕ ತೈಲ ಇರುವ ರಾಷ್ಟಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಅಲ್ಲಿರುವ ಆಡಳಿತವನ್ನ ಅಮೆರಿಕಾ ಅಸ್ಥಿರಗೊಳಿಸುತ್ತಿದೆ. ಬೇರೆ ಬೇರೆ ಸಮಸ್ಯೆ ಸೃಷ್ಠಿಸಿದ ಕಾರಣ ಇಂತಹ ಪರಿಸ್ಥಿತಿ ಬಂದಿದೆ ಇದರಿಂದಾಗಿ ನಾವು ಸಮಸ್ಯೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ ಎಂದರು.
ಈ ಸಂಬಂಧ 56 ಇಂಚಿನ ಎದೆಯ ಪ್ರಧಾನಿ ಏನೇಂದು ಉತ್ತರಿಸುತ್ತಾರೆ ಎಂದು ಕಾಯುತ್ತಿದ್ದೇವೆ ಸುದೀರ್ಘಕಾಲ ಬಾಂಧವ್ಯದಿಂದ ಇರುವ ರಾಷ್ಟ್ರಗಳನ್ನ ಏಕಾಏಕಿಯಾಗಿ ಕೈಬಿಡು ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲಾ ದೇಶಗಳಲ್ಲು ಅವರದ್ದೇ ಆದ ಆಂತರಿಕ ಸಮಸ್ಯೆ ಇರುತ್ತೆ ಅದರೆ ಅಂತರಾಷ್ಟ್ರಿಯ ಸಂಬಂಧ ಉಳಿಸಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಚಿವ ಸುಧಾಕರ್ ಕಿಡಿಕಾರಿದರು.
Key words: Effect, war, India, PM, Minister, Sudhakar







