ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಆಯುಕ್ತ ರಕ್ಷಿತ್ ಅವರೊಂದಿಗೆ JUST KANNADA ವಿಶೇಷ ಸಂದರ್ಶನ

Our aim is to ensure that there is no confusion among the public participating in the auction about the exact location of the site. In the past, some people used to ask questions about the lack of clarity about the location. Therefore, this time, Latitude and Longitude are being provided for each site. This way, buyers can check the location via Google Maps before bidding.

 

ಪ್ರಶ್ನೆ 1: ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ Latitude ಮತ್ತು Longitude ಮಾಹಿತಿ ನೀಡಲು ನಿರ್ಧರಿಸಿದೆ. ಇದರ ಹಿಂದಿನ ಉದ್ದೇಶ ಏನು?

ಉತ್ತರ: ಹರಾಜಿನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ನಿವೇಶನದ ನಿಖರ ಸ್ಥಳದ ಬಗ್ಗೆ ಯಾವುದೇ ಗೊಂದಲ ಉಂಟಾಗಬಾರದು ಎಂಬುದು ನಮ್ಮ ಉದ್ದೇಶ. ಹಿಂದೆ ಕೆಲವರು ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದ್ದರಿಂದ ಈ ಬಾರಿ ಪ್ರತಿಯೊಂದು ನಿವೇಶನಕ್ಕೂ Latitude ಮತ್ತು Longitude ನೀಡಲಾಗುತ್ತಿದೆ. ಇದರಿಂದ ಬಿಡ್ ಮಾಡುವ ಮುನ್ನವೇ ಖರೀದಿದಾರರು ಗೂಗಲ್ ಮ್ಯಾಪ್ ಮೂಲಕ ಸ್ಥಳವನ್ನು ಪರಿಶೀಲಿಸಬಹುದು.

ಪ್ರಶ್ನೆ 2: ಈ ಕ್ರಮದಿಂದ ಖರೀದಿದಾರರಿಗೆ ಯಾವ ರೀತಿಯ ಅನುಕೂಲವಾಗಲಿದೆ?

ಉತ್ತರ: ಖರೀದಿದಾರರು ಈಗ ನಿಖರ ಸ್ಥಳ, ಸುತ್ತಮುತ್ತಲಿನ ರಸ್ತೆ, ಸೌಲಭ್ಯಗಳು, ಪರಿಸರ ಇತ್ಯಾದಿಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು. ಹೀಗಾಗಿ ಹರಾಜಿನಲ್ಲಿ ಭಾಗವಹಿಸುವ ಮುನ್ನವೇ ನಿವೇಶನವನ್ನು ಪರಿಶೀಲಿಸಿ, ಆತ್ಮವಿಶ್ವಾಸದಿಂದ ಬಿಡ್ ಮಾಡಬಹುದು.

ಪ್ರಶ್ನೆ 3: ಸಾರ್ವಜನಿಕರಿಂದ ನಿವೇಶನಗಳ ಸ್ಥಳದ ಬಗ್ಗೆ ಗೊಂದಲ ವ್ಯಕ್ತವಾಗಿದ್ದೇ ಈ ನಿರ್ಧಾರಕ್ಕೆ ಕಾರಣವೇ?

ಉತ್ತರ: ಹೌದು, ಕೆಲ ಸಂದರ್ಭಗಳಲ್ಲಿ ನಿವೇಶನದ ಖಚಿತ ಸ್ಥಳದ ಬಗ್ಗೆ ಸಾರ್ವಜನಿಕರಿಂದ ಪ್ರಶ್ನೆಗಳು ಬಂದಿದ್ದವು. ಆ ಗೊಂದಲ ನಿವಾರಣೆ ಮಾಡುವ ಉದ್ದೇಶದಿಂದಲೇ ನಾವು ಈ ಬಾರಿ Latitude ಮತ್ತು Longitude ನೀಡುವ ವ್ಯವಸ್ಥೆ ಮಾಡಿದ್ದೇವೆ.

ಪ್ರಶ್ನೆ 4: MDA ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಇನ್ನೇನಾದರೂ ಹೊಸ ಕ್ರಮಗಳನ್ನು ಕೈಗೊಂಡಿದ್ದೀರಾ?

ಉತ್ತರ: ಹರಾಜು ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಿವೇಶನಗಳ ಸಂಪೂರ್ಣ ಮಾಹಿತಿ, ಅಳತೆ, ಬೆಲೆ ಹಾಗೂ ಈಗ ಸ್ಥಳದ ನಿಖರ ಮಾಹಿತಿ ಕೂಡ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಸುಲಭವಾಗುವಂತೆ ಎಲ್ಲ ವಿವರಗಳನ್ನು ಮುಂಚಿತವಾಗಿ ಪ್ರಕಟಿಸುತ್ತಿದ್ದೇವೆ.

ಪ್ರಶ್ನೆ 5: ಈ ಬಾರಿ ಹರಾಜಿಗೆ ಯಾವ ಯಾವ ಬಡಾವಣೆಗಳ ನಿವೇಶನಗಳು ಬರುತ್ತಿವೆ?

ಉತ್ತರ: ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಇರುವ ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. ಅವುಗಳ ಸಂಪೂರ್ಣ ವಿವರಗಳನ್ನು MDA ವೆಬ್‌ಸೈಟ್ ಮತ್ತು ಪ್ರಕಟಣೆಗಳಲ್ಲಿ ನೀಡಲಾಗಿದೆ.

ಪ್ರಶ್ನೆ 6: ಹರಾಜಿನಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ನೀವು ಏನು ಸಂದೇಶ ನೀಡಲು ಬಯಸುತ್ತೀರಿ?

ಉತ್ತರ: ಸಾರ್ವಜನಿಕರು ಯಾವುದೇ ಅನುಮಾನಗಳಿಲ್ಲದೆ ಹರಾಜಿನಲ್ಲಿ ಭಾಗವಹಿಸಬಹುದು. ನಾವು ಎಲ್ಲಾ ಮಾಹಿತಿಯನ್ನು ಪಾರದರ್ಶಕವಾಗಿ ನೀಡುತ್ತಿದ್ದೇವೆ. Latitude ಮತ್ತು Longitude ವ್ಯವಸ್ಥೆಯಿಂದ ನಿವೇಶನದ ನಿಖರ ಸ್ಥಳವನ್ನು ಮುಂಚಿತವಾಗಿ ಪರಿಶೀಲಿಸಿ ನಂತರ ಬಿಡ್ ಮಾಡಬಹುದು.

ಪ್ರಶ್ನೆ 7: ಮುಂದಿನ ದಿನಗಳಲ್ಲಿ MDA ಇನ್ನೂ ಯಾವ ರೀತಿಯ ಡಿಜಿಟಲ್ ವ್ಯವಸ್ಥೆಗಳನ್ನು ತರಲು ಯೋಜನೆ ಮಾಡುತ್ತಿದೆ?

ಉತ್ತರ: ಭವಿಷ್ಯದಲ್ಲಿ ಹರಾಜು ಮತ್ತು ನಿವೇಶನ ಮಾಹಿತಿಯನ್ನು ಇನ್ನಷ್ಟು ಡಿಜಿಟಲ್ ಮಾಡಲು ಯೋಜನೆ ಇದೆ. ಸಾರ್ವಜನಿಕರಿಗೆ ಸುಲಭವಾಗುವಂತೆ ಆನ್‌ಲೈನ್ ಸೇವೆಗಳು ಮತ್ತು ಮಾಹಿತಿ ವ್ಯವಸ್ಥೆಯನ್ನು ವಿಸ್ತರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ.

key words: Exclusive Interview, Mysore Development Authority, MDA, Commissioner, Rakshit

SUMMARY:

JUST KANNADA Exclusive Interview with Mysore Development Authority (MDA) Commissioner Rakshit

Our aim is to ensure that there is no confusion among the public participating in the auction about the exact location of the site. In the past, some people used to ask questions about the lack of clarity about the location. Therefore, this time, Latitude and Longitude are being provided for each site. This way, buyers can check the location via Google Maps before bidding.