ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡರನ್ನ ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಿಸಿದ್ದಾರೆ.
ಡಾ.ಈ.ಸಿ.ನಿಂಗರಾಜ್ ಗೌಡ ಅವರು ಬಿ.ಎಸ್ಸಿ., ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ., ಎಂ.ಎ ರಾಜ್ಯಶಾಸ್ತ್ರ, ಎಂ.ಎ ಪತ್ರಿಕೋದ್ಯಮ., ಗ್ರಾಮೀಣ ಅಭಿವೃದ್ದಿ, ಮಾನವ ಸಂಪನ್ಮೂಲ., ಎಂ. ಫಿಲ್., ಪತ್ರಿಕೋದ್ಯಮ ವಿಷಯದಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ತಲೆಬರಹದ ಮೇಲೆ ಪಿ.ಹೆಚ್.ಡಿ ಸೇರಿದಂತೆ 9 ವಿಷಯಗಳಲ್ಲಿ ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.
ಕಳೆದ 37 ವರ್ಷಗಳಿಂದ ಸಂಘ – ಪರಿವಾರದ ಸಕ್ರೀಯ ಕಾರ್ಯಕರ್ತರಾಗಿರುವ ಇವರು ಪ್ರೌಢಶಾಲೆಯ ವಿದ್ಯಾರ್ಥಿ ಆಗಿದ್ದಾಗಲೇ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ (RSS), ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತೀದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ (ABVP) ಕಾರ್ಯಕರ್ತರಾಗಿ ಮಂಡ್ಯ ನಗರ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಪ್ರಮುಖ್, ಮೈಸೂರು ಜಿಲ್ಲಾ ಪ್ರಮುಖ್, ರಾಜ್ಯ ಸಹ ಕಾರ್ಯದರ್ಶಿ, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಒಳಗೊಂಡಂತಹ ಮೈಸೂರು ವಿಭಾಗ ಪ್ರಮುಖ್ ಆಗಿ, ಹೀಗೆ ಎಬಿವಿಪಿಯಲ್ಲಿ ಹಲವಾರು ಜವಬ್ದಾರಿಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ ಸದಸ್ಯರಾಗಿ, ಹಣಕಾಸು ಸಮಿತಿ ಸದಸ್ಯರಾಗಿ, ಕ್ರೀಡಾ ಸಮಿತಿ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಯಶಸ್ವಿಯಾಗಿ, ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
Key words: Dr. E.C. Ningaraj Gowda, appointed, co-in-charge, Mysore division, BJP.







