ಬೆಂಗಳೂರು, ಮಾರ್ಚ್,3,2026 (www.justkannada.in): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB-PM-JAY-CMs-ArK) ಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಅಥವಾ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗುವ ಯಾವುದೇ ಪಾಲುದಾರರ ವಿರುದ್ಧ ಭ್ರಷ್ಟಾಚಾರ, ವೈದ್ಯಕೀಯ ಮತ್ತು ವೈದ್ಯಕೀಯೇತರ ವಂಚನೆ ಅಥವಾ ಉದ್ದೇಶಪೂರ್ವಕವಾಗಿ ಅಥವಾ ವಿವೇಚನಾಯುತವಾಗಿ ಅಧಿಕಾರ ದುರುವಯೋಗದಂತಹ ಯಾವುದೇ ಆರೋಪಗಳು ಕಂಡುಬಂದಲ್ಲಿ ಆರೋಪಿತರ ವಿರುದ್ಧ ದೂರು/ಮಾಹಿತಿ ನೀಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಟ್ಟು ಇಂತಹ ಪ್ರಕರಣಗಳ ಮಾಹಿತಿ ಪಡೆದು ವಿಚಾರಣೆ ನಡೆಸಲು Whistle Blower Policy ಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಸರ್ಕಾರದ ಆದೇಶದ ಅನ್ವಯ ಅನುಷ್ಠಾನಗೊಳಿಸಲಾಗಿದೆ.
ಅದರಂತೆ, ): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ (AB-PM-JAY-CMs-ArK) ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗಿರುವ ಯಾವುದೇ ಪಾಲುದಾರರ ವಿರುದ್ಧ ಕೇಳಿಬರುವ ಅಂತಹ ಆರೋಪದ ಮೇಲೆ ದೂರುಗಳನ್ನು ಸ್ವೀಕರಿಸಲು, ವಿಚಾರಿಸಲು, ಅಂತಹ ದೂರು ನೀಡುವ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡಲು ಹಾಗೂ ಅದಕ್ಕೆ ಪ್ರಾಸಂಗಿಕವಾದ ವಿಷಯಗಳ ಬಹಿರಂಗಪಡಿಸುವಿಕೆಯ ವಿರುದ್ಧ ಸಾಕಷ್ಟು ಸುರಕ್ಷತೆಗಳನ್ನು ಒದಗಿಸುವುದು Whistle Blower Policy ಯ ಉದ್ದೇಶವಾಗಿದೆ.
ಗುರುತರ ಆರೋಪಗಳ ಬಹಿರಂಗ ಪಡಿಸುವಿಕೆಯನ್ನು ಸುರಕ್ಷಿತವಾಗಿ ಸ್ವೀಕರಿಸುವ ಮತ್ತು ಅದರ ಬಗ್ಗೆ, ವಿವರವಾದ ತನಿಖೆ ನಡೆಸಿ ಪ್ರಾಥಮಿಕ ವರದಿಯನ್ನು Whistle Blower Committee ಗೆ ಸಲ್ಲಿಸುವ ನಾಮನಿರ್ದೇಶಿತ/ನೇಮಕಾತಿಗೊಂಡ ಒಬ್ಬ ಅಧಿಕಾರಿಯನ್ನು Whistle Blower Officer ಎಂದು ಕರೆಯಲಾವುದು. ಅದರಂತೆ ಮುಖ್ಯ ಜಾಗೃತಾಧಿಕಾರಿಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು Whistle Blower Officer ಆಗಿರುತ್ತಾರೆ.
ವಿಸಲ್ ಬ್ಲೊವರ್ ಕಮಿಟಿ(Whistle Blower Committee) ಯು ವಿಸಲ್ ಬ್ಲೊವರ್ ಆಫಿಸರ್ (Whistle Blower Officer) ಸಲ್ಲಿಸಿದ ತನಿಖಾ ವರದಿಯ ಕುರಿತು ಮತ್ತಷ್ಟು ಚರ್ಚಿಸಿ ಪರಿಶೀಲಿಸುತ್ತದೆ. ಈ ಸಮಿತಿಯು ಸಕ್ಷಮ ಪ್ರಾಧಿಕಾರದ ನಿರ್ದಿಷ್ಟ ಅನುಮೋದನೆಯ ಮೇರೆಗೆ ಅಗತ್ಯವಿರುವ ಯಾವುದೇ ಇತರ ಅಧಿಕಾರಿಯ ಸಹಾಯವನ್ನು ಪಡೆದು ಕ್ರಮವಹಿಸುತ್ತದೆ.
ಯಾವುದೇ ಮಾಹಿತಿ ಇದ್ದಲ್ಲಿ Whistle Blower ಅಧಿಕಾರಿಗೆ ಮಾಹಿತಿ ಸಲ್ಲಿಸಬಹುದು. ಮಾಹಿತಿ ಸಲ್ಲಿಸಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ದೂರು ಸಲ್ಲಿಸಲು ವಾಟ್ಸಪ್ ನಲ್ಲಿ ವಿವರವಾದ ಮಾಹಿತಿ ನೀಡಲು ದೂರವಾಣಿ ಸಂಖ್ಯೆ: 9480819724 ಗೆ ಸಂಪರ್ಕಿಸಬಹುದು. ಆಸ್ಪತ್ರೆಗಳು, ಫಲಾನುಭವಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಜಾಗೃತಾಧಿಕಾರಿಗಳು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, “ಆರೋಗ್ಯ ಸೌಧ”, 7ನೇ ಮಹಡಿ, 1ನೇ ಕ್ರಾಸ್, ಮಾಗಡಿ ರಸ್ತೆ, ಬೆಂಗಳೂರು-560 023 ಅಥವಾ ದೂರವಾಣಿ ಸಂಖ್ಯೆ 9480819724 ಅಥವಾ ಉಚಿತ ಸಹಾಯವಾಣಿ ಸಂಖ್ಯೆ: 18004258330 ಹಾಗೂ ಇಮೇಲ್ ವಿಳಾಸ: cvosast@gmail.com ಗೆ ಸಂಪರ್ಕಿಸಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
Key words: Whistle Blower Policy, implemented, complain, corruption







