ಯುದ್ಧ ಸಂಪೂರ್ಣ ನಿಲ್ಲುವವರೆಗೂ ಎಲ್ಲರನ್ನ ಅಲ್ಲಿಂದ ಕರೆಸುವುದು ಕಷ್ಟ- ಕೇಂದ್ರ ಸಚಿವ HDK

ಮೈಸೂರು ,ಮಾರ್ಚ್,2,2026 (www.justkannada.in): ಇರಾನ್- ಇಸ್ರೇಲ್ ನಡುವೆ ಸಂಘರ್ಷ ಕನ್ನಡಿಗರು ಸಿಲುಕಿರುವ ಸಂಬಂಧ ಯುದ್ಧ ಸಂಪೂರ್ಣ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನ ಕರೆಸುವುದು ಕಷ್ಟ. ವಿಮಾನ ಹಾರಾಟ ಆರಂಭವಾದರೆ ಎಲ್ಲರೂ ಬಹುಬೇಹ ಸುರಕ್ಷಿತವಾಗಿ ಬರುತ್ತಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಮಾನ ಹಾರಾಟ ಬಂದ್ ಆಗಿರುವ ಕಾರಣ ಸಮಸ್ಯೆಯಾಗಿದೆ. ದುಬೈನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಸಾಧ್ಯವಾದಷ್ಟು ಕನ್ನಡಿಗರ ಸಹಾಯಕ್ಕೆ ಬಂದಿದ್ದಾರೆ. ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರವು ಕೂಡ ಎಲ್ಲಾ ಭಾರತೀಯರ ಸುರಕ್ಷತೆ ಒತ್ತು ಕೊಟ್ಟಿದೆ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ಅಧಿಕಾರ ಹಸ್ತಾಂತರ ವಿಚಾರ: ಹೊಸ ಬಾಂಬ್ ಸಿಡಿಸಿದ  ಎಚ್.ಡಿ ಕುಮಾರಸ್ವಾಮಿ.

ಅಧಿಕಾರ ಹಸ್ತಾಂತರ ವಿಚಾರ ಕುರಿತು ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ., ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಈಗಲೂ ಫೋನ್ ಟ್ಯಾಪಿಂಗ್ ಇದೆ.. ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆ ರೀತಿ ವರ್ತಿಸುತ್ತಾರೆ. ನಾನು ಸತ್ಯ ಹೇಳುತ್ತೇನೆ ಕೇಳಿ, ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಇವತ್ತಿನ ಸರ್ಕಾರದಲ್ಲಿ ಅದು ಎಷ್ಟು ಹೆಚ್ಚಾಗಿದೆ ಎಂಬುದು ಅವರನ್ನೇ ಕೇಳಬೇಕು. ಅವರದ್ದೇ ಶಾಸಕರ ಮೇಲೆ ಅವರದ್ದೇ ಸಚಿವರು ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು. ಸಿಎಂ ಆಗಬೇಕೆಂದುಕೊಂಡವರು ಅವರ ಸರ್ಕಾರದ ಮೇಲೆ ಗುಪ್ತಚರಿಕೆ ಆರಂಭಿಸಿರುವುದು ದುರಂತ ಎಂದು ಎಚ್.ಡಿ ಕುಮಾರಸ್ವಾಮಿ  ವಾಗ್ದಾಳಿ ನಡೆಸಿದರು.

Key words Conflict, Iran, Israel war, over,  Union Minister HDK