ಬೆಂಗಳೂರು,ಫೆಬ್ರವರಿ,2,2026 (www.justkannada.in): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ಜಂಟಿ ದಾಳಿ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಳ್ಳಾರಿ ಜಿಲ್ಲೆಯ 32 ಮಂದಿ, ಬೆಂಗಳೂರಿನ 25 ಜನರು, ಚಿಕ್ಕಬಳ್ಳಾಪುರ 2, ದಾವಣಗೆರೆಯ 9 ಮಂದಿ ಕೊಡಗಿನ 4 ಮಂದಿ ಸೇರಿ 100 ಮಂದಿ ದುಬೈನಲ್ಲಿ ಸಿಲುಕಿದ್ದಾರೆ ಮತ್ತು ಹಾಗೆಯೇ ಹಾಸನದ 4 ಮಂದಿ ಕೊಡಗು ಜಿಲ್ಲೆಯ ಓರ್ವ ಉಡುಪಿಯ 3 ಮಂದಿ ಇತರೆ ಜಿಲ್ಲೆಯ ಓರ್ವ ಸೇರಿ 9 ಮಂದಿ ಬಹ್ರಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಮುಂದಾಗಿದೆ.
Key words: Iran-Israel, conflict, 109 Kannadigas, Dubai, Bahrain







