ಬೆಳಗಾವಿ,ಫೆಬ್ರವರಿ,28,2026 (www.justkannada.in): ಒಳ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಆ ರೀತಿ ಏನು ಅನ್ಯಾಯವಾಗಿಲ್ಲ. ಒಳಮೀಸಲಾತಿಯನ್ನು ತಡೆಹಿಡಿದಿರುವುದು ಕೋರ್ಟ್. ಸದ್ಯಕ್ಕೆ ಒಳಮೀಸಲಾತಿ ಇಲ್ಲ ಎಂದರು.
ನ್ಯಾಯಾಲಯದಲ್ಲಿ ಇರುವುದರಿಂದ ತಡೆ ಹಿಡಿಯಲಾಗಿದೆ. ಅಂತಿಮ ತೀರ್ಪು ಬಂದ ಬಳಿಕ ಒಳಮೀಸಲಾತಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
Key words: court, stay, internal reservation, Minister, Satish Jarkiholi







