Friday, October 16, 2026

Dasara Wishes

Happy Dasara
Home Crime ಅಸಿಸ್ಟೆಂಟ್ ಲೇಬರ್ ಇನ್ಸ್ ಪೆಕ್ಟರ್ ಗೆ ಕಾರು ಹರಿಸಿ ಕೊಂದ ಪ್ರಭಾವಿ ಶ್ರೀಮಂತರ ಮಕ್ಕಳು

ಅಸಿಸ್ಟೆಂಟ್ ಲೇಬರ್ ಇನ್ಸ್ ಪೆಕ್ಟರ್ ಗೆ ಕಾರು ಹರಿಸಿ ಕೊಂದ ಪ್ರಭಾವಿ ಶ್ರೀಮಂತರ ಮಕ್ಕಳು

ಹೊಸೂರು,ಫೆಬ್ರವರಿ,28,2026 (www.justkannada.in):  ಕ್ಷುಲಕ ಕಾರಣಕ್ಕೆ ಕಾರ್ಮಿಕ ಇಲಾಖೆಯ ಸಹಾಯಕ ನಿರೀಕ್ಷಕರೊಬ್ಬರ   ಮೇಲೆ ಶ್ರೀಮಂತ ಪ್ರಭಾವಿ ಮುಖಂಡರುಗಳ ಮಕ್ಕಳು ಕಾರು ಹರಿಸಿ ಹತ್ಯೆಗೈದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹೊಸೂರಿನ ಅಣ್ಣೈ ಅರವಿಂದ್ ನಗರದಲ್ಲಿ ಈ ಘಟನೆ ನಡೆದಿದೆ. 54 ವರ್ಷದ ಶಿವಮೂರ್ತಿ ಅಸಿಸ್ಟೆಂಟ್ ಲೇಬರ್ ಆಫಿಸರ್.  ಕೃತ್ಯವೆಸಗಿದ ಆದಿತ್ಯ, ರಿತಿಕ್ ಕುಮಾರ್, ಹರೀಶ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿದ್ದ ಶ್ರೀಮಂತರ ಮಕ್ಕಲು ಕುಡಿದ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಮನೆಯಿಂದ ಹೊರ ಬಂದು ಶಿವಮೂರ್ತಿ ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದವರು ಮತ್ತು ಶಿವಮೂರ್ತಿ ಅವರ ನಡುವೆ ವಾಗ್ವಾದ ನಡೆದು ಶಿವಮೂರ್ತಿ ಅವರಿಗೆ ಬಂಧಿತರು ಕಾರಿನಿಂದ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಶಿವಮೂರ್ತಿ ಪ್ರಾಣ ಬಿಟ್ಟಿದ್ದಾರೆ.

ಇನ್ನು ಶಿವಮೂರ್ತಿ ಅವರ ಮಗ ಸೊಸೆ ಮೊಮ್ಮಗನಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Key words: rich people, killed, assistant labor inspector, car